ಶ್ರೀಮಂಗಲ, ಮೇ 15: ಶನಿವಾರ ಸಂಜೆ ಮತ್ತು ರಾತ್ರಿ ದಕ್ಷಿಣ ಕೊಡಗಿನ ಬಹುಭಾಗದಲ್ಲಿ ರಭಸದ ಗಾಳಿ, ಆಲಿಕಲ್ಲು ಮಳೆ ಸುರಿದಿದೆ.
ಹಲವು ಭಾಗದಲ್ಲಿ ಮರಗಳು ಉರುಳಿ ಬಿದ್ದಿದೆ. ಶ್ರೀಮಂಗಲ, ಟಿ. ಶಿಟ್ಟಿಗೇರಿ, ಬಿರುನಾಣಿ, ಹುದಿಕೇರಿ, ಕುಟ್ಟ, ಬಲ್ಯಮುಂಡೂರು, ನಾಲ್ಕೇರಿ, ಕಾನೂರು ವಿಭಾಗದಲ್ಲಿ ಮಳೆ-ಗಾಳಿಗೆ ತುತ್ತಾಗಿ ಶನಿವಾರ ಸಂಜೆಯಿಂದ ವಿದ್ಯುತ್ ಕಡಿತವಾಗಿದೆ.
ಟಿ. ಶೆಟ್ಟಿಗೇರಿ-ಬಿರುನಾಣಿ ಮುಖ್ಯ ರಸ್ತೆ ನಡುವೆ ಭಾರೀ ಗಾತ್ರದ ಮರ ಬಿದ್ದು ರಸ್ತೆ ಸಂಚಾರಕ್ಕೆ ತಡೆಯಾಗಿತ್ತು. ಗ್ರಾಮಸ್ಥರೇ ಮರ ತೆರವು ಮಾಡಿದರು.