ಮಡಿಕೇರಿ, ಜೂ. 26: ಸೋಮವಾರಪೇಟೆ ತಾಲೂಕಿನ ರಂಗಸಮುದ್ರ (ಇತರ), ಜಾರುಕೊಲ್ಲಿ (ಮಿನಿ) (ಅ.ಸಂ), ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ಅದೇ ಗ್ರಾಮದ, ವಾರ್ಡ್‍ನವರಾಗಿರಬೇಕು. 18 ರಿಂದ 35 ವಯೋಮಿತಿಯವರಿರಬೇಕು.

ಜಂಬೂರು ಲೈನ್(ಪ.ಜಾ), ಯಡವಾರೆ, ವಿಜಯನಗರ, ಹೊಸಗುತ್ತಿ-ಹೊಸಳ್ಳಿ, ಕೂತಿ, ದೊಡ್ಡಮಳ್ತೆ, ಹಾನಗಲ್ಲು, ಕೊತ್ತನಳ್ಳಿ, ಮಾಟ್ನಳ್ಳಿ, ದೊಡ್ಡಳುವಾರ, ಯಡವನಾಡು ಮತ್ತು ಚೆಟ್ಟಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕಿ ಹುದ್ದೆಗೆ ಕನಿಷ್ಟ 4ನೇ ತರಗತಿ ಗರಿಷ್ಠ 9ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ಅದೇ ಗ್ರಾಮದ ಅದೇ ವಾರ್ಡ್‍ನವರಾಗಿರಬೇಕು. 18 ರಿಂದ 35 ವಯೋಮಿತಿಯವರಿರಬೇಕು. ಬಿಪಿಎಲ್ ಕಾರ್ಡ್, ಮೀಸಲಾತಿಗೆ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸೋಮವಾರಪೇಟೆ ಇಲ್ಲಿಗೆ ಜುಲೈ 12 ರೊಳಗೆ ಕಚೇರಿ ವೇಳೆಯಲ್ಲಿ ಸಲ್ಲಿಸುವದು. ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಪರಿಗಣಿಸಲಾಗುವದಿಲ್ಲ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿ, ಸೋಮವಾರಪೇಟೆ ಇಲ್ಲಿ ಕಚೇರಿ ವೇಳೆಯಲ್ಲಿ ಹಾಗೂ ದೂ.ಸಂ: 08276-282281 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.