ಮಡಿಕೇರಿ, ಜೂ. 17: ಸಮೀಪದ ಸಿದ್ದಾಪುರ - ಕುಶಾಲನಗರ ರಸ್ತೆಯ ನಂಜರಾಯಪಟ್ಟಣ ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲಿ ಪರವಾನಿಗೆ ರಹಿತವಾಗಿ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿರುವ ಮಾಹಿತಿಯನ್ನು ಬೆನ್ನತ್ತಿದ ಕುಶಾಲನಗರ ಗ್ರಾಮಾಂತರ ಪೆÇೀಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್ ತಮ್ಮ ತಂಡದೊಂದಿಗೆ ಟ್ಯಾಕ್ಟರ್ (ಕೆ.ಎ.12-ಟಿ 6590) ನ್ನು ಹಾಗೂ ಚಾಲಕ ಪ್ರಕಾಶ್ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ ಯಲಕನೂರು ಸಮೀಪದ ಕೋರೆಯಿಂದ ಅಕ್ರಮ ಕಲ್ಲು ಸಾಗಿಸುತ್ತಿದ್ದ ಮಿನಿ ಲಾರಿ (ಕೆ.ಎ.12 -ಎ3424) ಯನ್ನು ಹಾಗೂ ಚಾಲಕ ಕಾಳಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ಎರಡು ಪ್ರಕರಣಗಳನ್ನು ಸೋಮವಾರಪೇಟೆ ದಂಡಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಲೋಕೇಶ್, ಸುರೇಶ್, ಮಹೇಶ್, ಚಾಲಕ ಸುಜಿತ್ ಇದ್ದರು.