ನಾಪೋಕ್ಲು, ಜೂ. 28: ಸಮೀಪದ ಕೋಕೇರಿ ಗ್ರಾಮದ ಪಳಂಗಪ್ಪ ಎಂಬವರ ಲೈನ್ ಮನೆಯ ಕೋಣೆಯೊಂದರಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕೆಯಾಗಿರುವ ಜಯ (32) ಎಂಬ ಮಹಿಳೆ ಸಾವನ್ನಪ್ಪಿರುವ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ಪಳಂಗಪ್ಪ ದೂರು ನೀಡಿದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಕಳೆದ ಒಂಭತ್ತು ದಿನಗಳ ಹಿಂದೆ ಪಳಂಗಪ್ಪನವರಲ್ಲಿ ಕೆಲಸಕ್ಕೆ ಸೇರಿದ್ದ ಚಂದ್ರ ಎಂಬಾತ ನಾಪತ್ತೆಯಾಗಿದ್ದು, ಕೆಲವು ಅನುಮಾನಗಳಿಗೆ ಕಾರಣವಾಗಿದೆ. ಮೃತದೇಹದಲ್ಲಿ ಗಾಯದ ಗುರುತುಗಳಿದ್ದು, ಕೊಲೆ ಶಂಕೆ ವ್ಯಕ್ತವಾಗಿ ವಾರಿಸುದಾರರು ಇಲ್ಲದ ಕಾರಣ ಮೃತದೇಹ ಹಾಗೆಯೇ ಇಡಲಾಗಿದೆ.