ವೀರಾಜಪೇಟೆ, ಜೂ. 17: ಹಿಂದೂ ಅಗ್ನಿ ದಳ ಸಂಘಟನೆಯ ವತಿಯಿಂದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕೋಟುಪರಂಬು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ 200 ಪುಟಗಳ 300 ನೋಟ್ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭ ಹಿಂದೂ ಅಗ್ನಿ ದಳದ ಸಂಚಾಲಕ ಎನ್.ಪಿ. ದಿನೇಶ್, ಕಾಕೋಟುಪರಂಬು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಂಡಚ್ಚೀರ ಚಿಂಗಪ್ಪ, ಮುಖ್ಯ ಶಿಕ್ಷಕಿ ಪಿ.ಜಿ. ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.