ವೀರಾಜಪೇಟೆ, ಜೂ. 20: ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳಾದ ಅಮೇರಿಕಾದ ಬೋಸ್ಟನ್‍ನಲ್ಲಿ ವಿಜ್ಞಾನಿಯಾಗಿರುವ ಗೀತಾ ಮತ್ತು ಜಗದೀಶ್ ಮದೇರೊ ಅವರು ಸಂತ ಅನ್ನಮ್ಮ ಶಾಲೆಗೆ ಉದಾರವಾಗಿ ನೀಡಿದ್ದ ರೂ. 5 ಲಕ್ಷಗಳಲ್ಲಿ ಬಂದ ಬಡ್ಡಿ ಹಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗುತ್ತಿದ್ದು ಈ ಬಾರಿ 280 ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಲಾಗಿದೆ ಎಂದು ಸಂತ ಅನ್ನಮ್ಮ ಧರ್ಮ ಗುರುಗಳಾದ ಧರ್ಮಗುರು ಆರೋಗ್ಯ ಸ್ವಾಮಿಗಳು ತಿಳಿಸಿದ್ದಾರೆ.
ಇದೇ ಸಂದರ್ಭ ಫಾದರ್ ಮದಲೈಮುತ್ತು, ಶಾಲಾ ಮುಖ್ಯ ಶಿಕ್ಷಕಿಯರಾದ ಮಾರ್ಗರೇಟ್ ಲಸ್ರಾಗೊ, ಸಿಸ್ಟರ್ ಜಾನೆಟ್ ಪಿಂಟೋ, ಸಿಸ್ಟರ್ ಶೆಲ್ವಿ ಉಪಸ್ಥಿತರಿದ್ದರು. ಶಿಕ್ಷಕಿ ರೀಟಾ ಕಾರ್ಯಕ್ರಮ ನಿರೂಪಿಸಿದರು.