ಹೆಬ್ಬಾಲೆ, ಜೂ. 4: ಸ್ಥಳೀಯ ಹೆಬ್ಬಾಲೆ ನಿವಾಸಿ ವೆಂಕಟರಮಣ ಎಂಬವರ ಮನೆಯಲ್ಲಿ ಕಳೆದ ತಾ. 29ರಂದು ಹಗಲು ವೇಳೆಯಲ್ಲಿಯೇ ಮನೆಯ ಹಂಚನ್ನು ತೆÉಗೆದು ಮನೆಯಲ್ಲಿದ್ದ ತಿಜೋರಿಯನ್ನು ಒಡೆದು ಸುಮಾರು ರೂ.40ಸಾವಿರ ನಗದು ಹಣವನ್ನು ದೋಚಿ ಕಳ್ಳತನ ಮಾಡಿದ ಪ್ರಕರಣ ಕುಶಾಲನಗರದ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಕುಶಾಲನಗರದ ಡಿ.ವೈ.ಎಸ್.ಪಿ ಕುಮಾರ್ ಹಾಗೂ ಸಿ.ಪಿ.ಐ ಸಂದೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ಜಿ.ಈ. ಮಹೇಶ್ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ಮಂಜು(45) ಅಲಿಯಾಸ್ ಮಂಜುನಾಥ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಪಕ್ಕದ ಮನೆಯವನಾಗಿದ್ದು, ಆತನೇ ಕಳ್ಳತನ ಮಾಡಿರುವದು ಪತ್ತೆಯಾಗಿದೆ.
ಈತನಿಂದ 30 ಸಾವಿರ ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ ಆನಂದ್, ಪೆÇಲೀಸ್ ಸಿಬ್ಬಂದಿಗಳಾದ ಲೋಕೇಶ್, ಮಹೇಶ್, ಸುದೀಶ್, ಜಗದೀಶ್, ಚಾಲಕ ಸುಜಿತ್, ಹೆಬ್ಬಾಲೆ ಉಪಠಾಣೆಯ ಮಾಚಯ್ಯ ಇದ್ದರು.