ಕೂಡ್ಲೂರು, ಜೂ. 25: ಇಲ್ಲಿಗೆ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಟಿ.ಸಿ.ಸಿ. ಮತ್ತು ಐ.ಟಿ.ಸಿ. ಕಾಫಿ ಕ್ಯೂರಿಂಗ್ ವಕ್ರ್ಸ್‍ನ ಆವರಣದಲ್ಲಿ ಸ್ವಚ್ಛತಾ ಸಪ್ತಾಹವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ್ ಡೆಂಗಿ ಜ್ವರ, ಮಲೇರಿಯಾ ಜ್ವರ ಹೇಗೆ ಬರುತ್ತದೆ. ಅದನ್ನು ಹೇಗೆ ತಡೆಗಟ್ಟುವದು ಎಂಬದಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟ ಶಾಸ್ತ್ರಜ್ಞ ಮಂಜುನಾಥ, ಹಿರಿಯ ಆರೋಗ್ಯ ನಿರೀಕ್ಷಕ ನಾಗೆಂದ್ರ, ಆರೋಗ್ಯ ಮೇಲ್ವಿಚಾರಕ ದೇವರಾಜು ಮತ್ತು ತಾಲೂಕು ಆರೋಗ್ಯ ನಿರೀಕ್ಷಕ ಕೆ.ಪಿ. ಮಹೇಶ್ ಹಾಜರಿದ್ದರು.