ಮಡಿಕೇರಿ, ಜೂ. 26: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಎ.ಕೆ. ಮನು ಮುತ್ತಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮನಿಯಪಂಡ ಕಾಂತಿ ಸತೀಶ್, ವಿ.ಕೆ. ಲೋಕೇಶ್ ಕುಮಾರ್, ಜಿಲ್ಲಾ ವಕ್ತಾರರಾಗಿ ಎರಡನೇ ಬಾರಿಗೆ ಸುಬ್ರಹ್ಮಣ್ಯ ಉಪಾಧ್ಯಾಯ ಆಯ್ಕೆ ಆಗಿದ್ದು, ಇವದೊಂದಿಗೆ ರತ್ನಾಕರ ಶೆಟ್ಟಿ, ಅಭಿಮನ್ಯು ಕುಮಾರ್ ಕೂಡ ವಕ್ತಾರರಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಪಟ್ರಪಂಡ ರಘು ನಾಣಯ್ಯ, ಪುದಿಯೊಕ್ಕಡ ಬೆಲ್ಲು ಸೋಮಯ್ಯ, ಬಿ. ಶಿವಪ್ಪ, ಬಿ.ಕೆ. ಅರುಣ್ ಕುಮಾರ್, ಚಿಲ್ಲನ ಗಣಿ ಪ್ರಸಾದ್, ತೀತಿರ ಊರ್ಮಿಳಾ, ಉಷಾ ತೇಜಶ್ವಿನಿ, ಮೊಂತಿ ಗಣೇಶ್. ಕಾರ್ಯದರ್ಶಿಯಾಗಿ ರವಿ ಬಸಪ್ಪ, ಮನು ಮಂಜುನಾಥ್, ಅನಿಲ್ ಶೆಟ್ಟಿ, ವೈ.ಎಂ. ಪ್ರಕಾಶ್, ಬಿದ್ದಂಡ ಉಷಾ ದೇವಮ್ಮ, ಗುಮ್ಮಟ್ಟಿರ ಕಿಲನ್ ಗಣಪತಿ, ಬೊಳ್ಳೂರು ಜಾನಕಿ ಉದಯ ಕುಮಾರ್, ಮನಿಯಪಂಡ ದೇಚಮ್ಮ ಹಾಗೂ ಖಜಾಂಚಿಯಾಗಿ ಕಲ್ಮಾಡಂಡ ಮೋಹನ್ ಮೊಣ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.