ಮಡಿಕೇರಿ, ಜೂ. 17: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಗೋಕರ್ಣ ಮಂಡಲ ಹವ್ಯಕ ಮಾತೃ ಮಂಡಳಿ ಸಹಯೋಗದಲ್ಲಿ ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ನಿಯಮಾವಳಿಗಳು: ಹವ್ಯಕ ಭಾಷೆಯಲ್ಲಿ, ಹವ್ಯಕ ಮಹಿಳೆಯರು, ಅಖಿಲ ಭಾರತ ಮಟ್ಟದಲ್ಲಿ, ಈ ತನಕ ಬೇರೆಲ್ಲೂ ಪ್ರಕಟವಾಗದ ಸಾಮಾಜಿಕ ಕಥೆ, ಎಂಟು ಪುಟಕ್ಕೆ ಮೀರದಂತೆ (ಸಾದಾರಣ ಎರಡು ಸಾವಿರ ಪದಗಳು) ಕಾಗದದ ಒಂದೇ ಬದಿಗೆ ಬರೆಯಬೇಕು. ಟೈಪ್ ಮಾಡಿದ ಪ್ರತಿಯಾದರೆ ಉತ್ತಮ. ವಯೋಮಿತಿ ಇಲ್ಲ. ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಈವರೆಗಿನ ಪ್ರಥಮ ಬಹುಮಾನಿತರು ಭಾಗವಹಿಸುವಂತಿಲ್ಲ. ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನವಾಗಿ ಪ್ರಥಮ ಎರಡು ಸಾವಿರ, ದ್ವಿತೀಯ ಒಂದು ಸಾವಿರ ಹಾಗೂ ತೃತೀಯ ಏಳುನೂರೈವತ್ತು ನೀಡಲಾಗುವದು. ಆಸಕ್ತರು ಆಗಸ್ಟ್ 31 ರ ಮೊದಲು ಕಳುಹಿಸಬೇಕು. ಕಥೆ ಕಳುಹಿಸಬೇಕಾದ ವಿಳಾಸ: ಶ್ರೀಮತಿ ವಿಜಯಾ ಸುಬ್ರಹ್ಮಣ್ಯ, ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ ಕುಂಬಳೆ - 671321, ಕಾಸರಗೋಡು ಜಿಲ್ಲೆ. ಮೊ. 08547214125.