ಗುಡ್ಡೆಹೊಸೂರು, ಜೂ. 7: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಜೀರ್ಣೋ ದ್ಧಾರಗೊಂಡ ಶ್ರೀ ಗಣಪತಿ, ಶ್ರೀ ಬಸವೇಶ್ವರ, ಶ್ರೀ ಚಾಮುಂಡೇಶ್ವರಿ ಹಾಗೂ ಗುಳಿಗ ದೇವರ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಕಳೆದ ಒಂದು ವಾರದಿಂದ ವಿವಿಧ ಪೂಜಾ ಕಾರ್ಯವನ್ನು ನಡೆಸಲಾಯಿತು. ಪೂಜಾ ಕಾರ್ಯವನ್ನು ಕೇರಳದ ಶ್ರೀ ಕಾಳೇಘಾಟ್ ಇಲ್ಲಂ ಶ್ರೀ ನಾರಾಯಣ ತಂತ್ರಿಗಳ ಸಾನಿಧ್ಯದಲ್ಲಿ ಜರುಗಿತು.
ಜ್ಯೋತಿಷಿಗಳಾದ ಉನ್ನಿಕೃಷ್ಣ ನಂಬೂದರಿ ತಂಡದವರು ಪೂಜಾ ಕಾರ್ಯವನ್ನು ನಡೆಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಮೈದಪಂಡ ಉಮೇಶ್ ಮಾದಪ್ಪ (ಅಶೋಕ), ಕಾರ್ಯದರ್ಶಿ ಮಧು, ಸಮಿತಿ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಗ್ರಾಮದ ನಿವಾಸಿ ಕಾಳ ಎಂಬವರು ದೇವಸ್ಥಾನ ನಿರ್ಮಿಸಲು ಉದಾರವಾಗಿ 30 ಸೆಂಟ್ ಜಾಗವನ್ನು ದಾನ ನೀಡಿದ್ದಾರೆ.
- ಗಣೇಶ್ ಕುಡೆಕಲ್.