ಸುಂಟಿಕೊಪ್ಪ, ಜೂ. 23: ಸುತ್ತೂರು ಕ್ಷೇತ್ರದ ಶ್ರೀ ಶೀವೆಂದ್ರ ರಾಜೇಂದ್ರ ಮಹಾಸ್ವಾಮಿಯವರ ಜನ್ಮಶತಮಾನೋತ್ಸವದ ಜ್ಯೋತಿ ಯಾತ್ರೆಯನ್ನು ಕನ್ನಡ ವೃತ್ತದ ಬಳಿ ಸ್ವಾಗತಿಸಲಾಯಿತು. ಮಾದಾಪುರ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಜ್ ಮೇರಿ ರಾಡ್ರಿಗಸ್, ಸದಸ್ಯ ಕೆ.ಇ. ಕರೀಂ ಮೊದಲಾದವರು ಸ್ವಾಗತಿಸಿದರು.
ಸುತ್ತೂರು ಜಗದ್ಗುರು ವೀರಸಂಸ್ಥಾನ ಮಠದ 2ನೇ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಶಿವರಾತ್ರಿಯವರು ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕøತಿ ಧಾರ್ಮಿಕ ಸಂಗೀತಕ್ಕೆ ಒತ್ತು ನೀಡಿ ಸುತ್ತೂರು ಮಠವನ್ನು ಉಚ್ಚ್ರಾಯ ಸ್ಥಿತಿಗೆ ತಲಪಿಸಿದ್ದಾರೆ ಎಂದು ಕುಮುದಾ ಧರ್ಮಪ್ಪ ಹೇಳಿದರು.
ಈ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹದೇವಪ್ಪ, ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಟಿ.ಜಿ. ಪ್ರೇಮ್‍ಕುಮಾರ್, ಕನ್ನಡಾಭಿಮಾನಿ ಎಂ.ಎಸ್. ರವಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಮತ್ತಿತರರು ಇದ್ದರು.