ಮಡಿಕೇರಿ, ಜೂ. 21: ಕಾಳುಮೆಣಸು ಕೃಷಿಗೆ ಸೂಕ್ತ ಸಮಯದಲ್ಲಿ ನೀರು ಒದಗಿಸುವದ ರಿಂದ ಉತ್ತಮ ಇಳುವರಿಯನ್ನು ಪಡೆಯುವದರೊಂದಿಗೆ ಬಳ್ಳಿಗಳು ದೀರ್ಘಕಾಲ ಬಾಳುತ್ತವೆಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಷಯ ತಜ್ಞರುಗಳಾದ ಕಾಡ್ಯಮಾಡ ದೇವಯ್ಯ ಮತ್ತು ಡಾ. ಪ್ರಭಾಕರ್ ತಿಳಿಸಿದರು.
ಕಾಫಿ ಮಂಡಳಿ ಸುಂಟಿಕೊಪ್ಪದ ಕಿರಿಯ ಸಂಪರ್ಕ ಅಧಿಕಾರಿ ನಾಗೇಶ್ ಅವರು ಕಾಫಿ ಬೆಳೆಯ ಬಗ್ಗೆ ಆಧುನಿಕ ರೀತಿಯ ಕ್ರಮವನ್ನು ಅನುಸರಿಸುವ ವಿಧಾನವನ್ನು ವಿವರಿಸಿ ಹೆಚ್ಚಿನ ಉತ್ಪತ್ತಿ ಪಡೆಯುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮವನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘ ಮಡಿಕೇರಿ, ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು, ಕಾಫಿ ಮಂಡಳಿ ಸುಂಟಿಕೊಪ್ಪ ಹಾಗೂ ಮಹಿಳಾ ಸಮಾಜ ನಂಜರಾಯಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಕೃಷಿಕರು ಹಾಜರಿದ್ದರು. ಕೊಡಗು ಗೌಡ ನಿವೃತ್ತ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ಮೂಟೇರ ನಂಜುಂಡ ವಂದಿಸಿದರು. ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈನಾಬಿ, ಮಹಿಳಾ ಸಮಾಜದ ಅಧ್ಯಕ್ಷೆ ಕೇಕಡ ಬೋಜಮ್ಮ, ಗೌಡ ಸಮಾಜ ಯುವ ಸಂಘದ ಅಧ್ಯಕ್ಷ ಪವನ್, ಕೊಡಗು ಗೌಡ ನಿವೃತ್ತ ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಮೇಡತ್ತನ ದೇವಕಿ, ಖಜಾಂಚಿ ಪೊನ್ನಚ್ಚನ ಸೋಮಣ್ಣ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.