ಕೂಡಿಗೆ, ಜೂ. 20: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಮೀಸಲು ಅರಣ್ಯ ಸಮೀಪವಿರುವ ಹಾರಂಗಿ ಮುಖ್ಯ ನಾಲೆಗೆ ಸಮೀಪದ ಅರಣ್ಯದಂಚಿನಲ್ಲಿ ಕಾಣಿಸಿಕೊಂಡ ಜಿಂಕೆಯನ್ನು ನಾಯಿ ಕಂಡು ಓಡಿಸಿದ ಹಿನ್ನೆಲೆಯಲ್ಲಿ ಜಿಂಕೆ ನಾಯಿಯಿಂದ ತಪ್ಪಿಸಿಕೊಳ್ಳುವ ಸಂದರ್ಭ ನಾಲೆಗೆ ಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಜಿಂಕೆಯ ಮೃತದೇಹವು ನಾಲೆಯಲ್ಲಿ ಕೊಳೆತ್ತಿದ್ದನ್ನು ಕಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ ಸಂದರ್ಭ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಆಗಮಿಸಿ, ಜಿಂಕೆಯ ಮೃತ ದೇಹವನ್ನು ಹೊರತೆಗೆದು ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಮೋನಿಶ್‍ಪಾಶ, ಹುದುಗೂರು ಉಪ ಅರಣ್ಯ ವಲಯಾಧಿಕಾರಿ ಸತೀಶ್, ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.