ಮಡಿಕೇರಿ, ಜೂ. 22: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರ ಜೀವನ ಮತ್ತು ಕೊಡುಗೆ ಕುರಿತಂತೆ ನಮನ ನೃತ್ಯ ರೂಪಕ ಮತ್ತು ನಾಟಕ ಪ್ರದರ್ಶನ ತಾ. 24 ಮತ್ತು 25 ರಂದು ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ತಾ. 24 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ರೂಪಾ ರಾಜೇಶ್ ಅವರ ಸಾರಥ್ಯದಲ್ಲಿ ನೃತ್ಯ ರೂಪಕ ನಡೆಯಲಿದೆ. ತಾ. 25 ರಂದು ಸಂಜೆ 6.30 ಗಂಟೆಗೆ ಖ್ಯಾತ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ (ನಾಡ ಒಡನಾಡಿ) ಜರುಗಲಿದೆ ಎಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ತಿಳಿಸಿದ್ದಾರೆ.