ಮಡಿಕೇರಿ, ಜೂ. 21: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವ ಹೊಂದಲು ಹಾಗೂ ಸದಸ್ಯತ್ವ ನವೀಕರಣಗೊಳಿಸಿಕೊಳ್ಳಲು ಜಿಲ್ಲೆಯ ಪತ್ರಕರ್ತರಿಂದ ಅರ್ಜಿ ಆಹ್ವಾನಿಸ ಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ (ಮುದ್ರಣ ಮತ್ತು ವಿದ್ಯುನ್ಮಾನ) ಕೆಲಸ ಮಾಡುತ್ತಿರುವ ಕಾರ್ಯನಿರತ ಪತ್ರಕರ್ತರು ಮಾತ್ರ ಸಂಘದಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ.

ಆರ್.ಎನ್.ಐ. ನೋಂದಣಿ ಹೊಂದಿರುವ ದಿನಪತ್ರಿಕೆಗಳು ಎರಡು ವರ್ಷ ನಿಯಮಿತವಾಗಿ ಪ್ರಕಟಗೊಂಡಿ ದ್ದಲ್ಲಿ ಮಾತ್ರ ಸದಸ್ಯತ್ವ ಪಡೆಯಲು ಅರ್ಹರು. ಪ್ರಾದೇಶಿಕ ಪತ್ರಿಕೆಗಳಿಗೆ ಸಂಪಾದಕರು ಸೇರಿದಂತೆ ಐವರಿಗೆ, ಪ್ರತಿ ತಾಲೂಕಿಗೆ ಒಬ್ಬರಂತೆ, ವಾರಪತ್ರಿಕೆಗಳಿಗೆ ಸಂಪಾದಕರು ಸೇರಿದಂತೆ ಇಬ್ಬರಿಗೆ ನೀಡಲಾಗುವದು. ವಾರಪತ್ರಿಕೆಗಳಿಗೆ ಆರ್.ಎನ್.ಐ. ಕಡ್ಡಾಯವಾಗಿದ್ದ, ವರ್ಷದ 48 ವಾರ ಗಳಲ್ಲಿ 43 ಸಂಚಿಕೆಗಳು ಪ್ರಕಟವಾಗಿರ ಲೇಬೇಕು. ಈ ಬಗ್ಗೆ 43 ಸಂಚಿಕೆಗಳ ಪ್ರತಿಗಳನ್ನು ಸಲ್ಲಿಸಬೇಕಾಗಿದೆ. ಪಾಕ್ಷಿಕ, ಮಾಸಿಕ ಪತ್ರಿಕೆಗಳಿಗೆ ಸಂಪಾದಕರು ಅಥವಾ ಯಾರಿಗಾದರೂ ಒಬ್ಬರಿಗೆ ಮಾತ್ರ, ಆರ್.ಎನ್. ಕಡ್ಡಾಯ, ಕ್ರೌನ್ ಅಳತೆಯ 12 ತಿಂಗಳಲ್ಲಿ 11 ತಿಂಗಳ ಸಂಚಿಕೆ ಪ್ರಕಟಗೊಂಡಿರಬೇಕು. ಪ್ರತಿಗಳನ್ನು ಸಲ್ಲಿಸಬೇಕು. ಟಿ.ವಿ. ಮಾಧ್ಯಮದಲ್ಲಿ ಸಂಪಾದಕರು ಉಪ ಸಂಪಾದಕರು, ನ್ಯೂಸ್ ಪ್ರೊಡ್ಯೂಸರ್ಸ್, ವಿಶ್ಯುವಲ್ ಎಡಿಟರ್ಸ್, ಕಾಪಿ ಎಡಿಟರ್ಸ್, ವೀಡೀಯೋಗ್ರಾಫರ್ಸ್ ಮಾತ್ರ ಸದಸ್ಯತ್ವ ಪಡೆಯಲು ಅರ್ಹರು. ಕೇಬಲ್ ಮತ್ತು ಸುದ್ದಿವಾಹಿನಿಗಳಿಗೆ ವರದಿಗಾರ ಹಾಗೂ ಕ್ಯಾಮರಾಮೆನ್‍ಗಳಿಗೆ ಮಾತ್ರ ನೀಡಬಹುದಾಗಿದ್ದು, ವಾರ್ತಾ ಇಲಾಖೆಯ ಅನುಮತಿ ಪತ್ರ ಅಗತ್ಯವಾಗಿರುತ್ತದೆ.

ಸರಕಾರಿ ನೌಕರರು, ಅರೆ ಸರಕಾರಿ, ಅನುದಾನಿತ ಶಿಕ್ಷಕ ಮತ್ತು ಸಿಬ್ಬಂದಿ ವರ್ಗ, ವಕೀಲರು, ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಪತ್ರಿಕೆಯನ್ನು ಕ್ರಮಬದ್ಧವಾಗಿ ಹೊರತರುತ್ತಿದ್ದರೆ ಅಥವಾ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಹವರುಗಳನ್ನು ಸಹ ಸದಸ್ಯತ್ವಕ್ಕೆ ಪರಿಗಣಿಸಲಾಗುತ್ತದೆ. ಸದಸ್ಯತ್ವ ಪಡೆಯಲು ಕನಿಷ್ಟ 21 ವರ್ಷ ವಯಸ್ಸಾಗಿದ್ದು, ಕನಿಷ್ಟ ಎಸ್.ಎಸ್. ಎಲ್.ಸಿ. ವಿದ್ಯಾರ್ಹತೆ ಹೊಂದಿರ ಬೇಕು. ಹೊಸದಾಗಿ ಸದಸ್ಯತ್ವ ಪಡೆಯು ವವರು ರೂ. 400 ಹಾಗೂ ನವೀಕರಿಸಿಕೊಳ್ಳುವವರು ರೂ. 300 ಶುಲ್ಕದೊಂದಿಗೆ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸದಸ್ಯತ್ವಕ್ಕೆ ಅರ್ಜಿಗಳು ಪತ್ರಿಕಾಭವನದಲ್ಲಿ ಲಭಿಸಲಿದ್ದು, ನಿಗದಿತ ನಮೂನೆಯಲ್ಲಿ ಪೂರ್ಣ ವಿವರಗಳೊಂದಿಗೆ ಅಗತ್ಯ ದಾಖಲೆ ಗಳೊಂದಿಗೆ ತಾ. 25 ರೊಳಗಡೆ ಅಧ್ಯಕ್ಷರು, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾ ಭವನ, ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸುವದು. ತಾ. 26 ರಂದು ಪರಿಶೀಲನೆ ನಡೆಯಲಿದ್ದು, ನಂತರ ಅರ್ಜಿಗಳನ್ನು ಯಾವದೇ ಕಾರಣಕ್ಕೂ ಸ್ವೀಕರಿಸಲಾಗುವದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ (8884432052), ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ (9972538584) ಇವರುಗಳನ್ನು ಸಂಪರ್ಕಿಸಬಹುದಾಗಿದೆ.