ಎuಟಿe 6 ಇಸ್ಲಾಂ ಧರ್ಮವು ಏಕದೈವ ವಿಶ್ವಾಸ, ಐದು ಹೊತ್ತಿನ ಕಡ್ಡಾಯ ನಮಾಝ್ ನಿರ್ವಹಣೆ, ವರಮಾನಕ್ಕನುಗುಣವಾದ ದಾನ ನೀಡಿಕೆ, ರಂಝಾನ್ ತಿಂಗಳ ವ್ರತಾಚರಣೆ, ಹಾಗೂ ಅನುಕೂಲ ಇರುವವರು ಜೀವಮಾನದಲ್ಲೊಂದು ಬಾರಿ ಕಡ್ಡಾಯವಾಗಿ ಪವಿತ್ರ ಹಜ್‍ಕರ್ಮ ನಿರ್ಮಿಸುವದು ಇವೇ ಐದು ಆಧಾರ ಸ್ಥಂಭಗಳ ಮೇಲೆ ನಿಂತಿದೆ. ಅವುಗಳ ಪೈಕಿ ಪವಿತ್ರ ರಂಝಾನ್ ಆಚರಣೆ ಪ್ರಾರಂಭಗೊಂಡಿದೆ. ರಂಝಾನ್ ತಿಂಗಳಿಗೆ ಇಸ್ಲಾಂ ಧರ್ಮದಲ್ಲಿ ವಿಶೇಷ ಸ್ಥಾನಮಾನ ಹಾಗೂ ಅತ್ಯಂತ ಗೌರವವನ್ನು ನೀಡಲಾಗಿದೆ. ಪಾಪ ವಿಮೋಚನೆಯ ತಿಂಗಳೆಂದೂ ಇದನ್ನು ಕರೆಯುತ್ತಾರೆ.

ಮುಸ್ಲಿಮರ ಪಾಲಿಗೆ ಇನ್ನು ಒಂದು ತಿಂಗಳ ಕಾಲ ಹಗಲು ಉಪವಾಸ ಆಚರಣೆ ಕಡ್ಡಾಯ. ಪ್ರೌಢ ಪ್ರಾಯಕ್ಕೆ ಕಾಲಿಸಿರಿರುವ ಆರೋಗ್ಯವಂತ ಶುದ್ಧಿ ಹಾಗೂ ಬುದ್ಧಿ ಇರುವ ಎಲ್ಲಾ ಮುಸ್ಲಿಮರೂ ವ್ರತ ಆಚರಿಸಲು ಅರ್ಹರು. ವ್ರತ ಕೈಗೊಳ್ಳುವದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯ ಇರುವ ವಯೋವೃದ್ಧರು, ತನ್ನ ರೋಗ ವಾಸಿ ಆಗಲಾರ ದೆಂದು ಖಚಿತವಾಗಿ ತಿಳಿದ ರೋಗಿಗಳು ವ್ರತ ಕೈಗೊಳ್ಳಬೇಕಾಗಿಲ್ಲ. ಗಭೀರ್ಣಿಯರು, ಹಾಲುಣಿಸುವ ಬಾಣಂತಿಯರು ತಮಗೆ ತೊಂದರೆ ಆಗುವದರಲ್ಲಿ ವ್ರತ ಕೈಗೊಳ್ಳಬೇಕಾಗಿಲ್ಲ. ಮಾಸಿಕ ಮುಟ್ಟಿನ ಸಂದರ್ಭ ದಲ್ಲೂ ವ್ರತ ಆಚರಿಸುವಂತಿಲ್ಲ. ಬೆಳಗ್ಗಿನ ಬಾಂಗ್ ಕರೆಗೆ ಮುನ್ನ ಆಹಾರ (ಸಹರಿ) ಸೇವಿಸಿದ ವ್ಯಕ್ತಿ ಮತ್ತೆ ಸೂರ್ಯಾಸ್ತಮ ವಾದ ಬಳಿಕವೇ ಇಫ್ತಾರ್ (ಆಹಾರ ಪಾನೀಯ) ಸೇವಿಸ ತಕ್ಕದ್ದು ಆ ನಡುವೆ ಯಾವದೇ ರೀತಿಯ ಆಹಾರ ಪಾನೀಯಗಳ ಸೇವನೆ ನಿಷಿದ್ಧ. ವ್ರತ ಕೈಗೊಂಡ ವ್ಯಕ್ತಿ ಎಲ್ಲಾ ರೀತಿಯ ಕೆಡುಕುಗಳಿಂದಲೂ ದೂರವಿರಬೇಕು. ಸುಳ್ಳು-ಮೋಸ ಮನರಂಜನೆ, ವಂಚನೆ, ಚಾಡಿ ದೂಷಣೆ, ಸಿಟ್ಟು ಕ್ರೋಧ ಜಗಳ ನಿಂದನೆಗಳಲ್ಲಿ ತೊಡಗುವವರ ವ್ರತ ಸಿಂಧು ಆಗಲಾರದು ಎಂದು ಧರ್ಮವು ಹೇಳಿದೆ.

ವಿಶ್ವ ಮುಸ್ಲಿಮರ ಪವಿತ್ರ ಗ್ರಂಥ ‘ಖುರ್‍ಆನ್’ ಅವತೀರ್ಣಗೊಂಡ ಮಾಸ ಕೂಡ ರಂಝಾನ್ ಆಗಿರುವದರಿಂದ ಈ ಮಾಸಕ್ಕೆ ಹೆಚ್ಚಿನ ಗೌರವ ಸಲ್ಲುತ್ತದೆ. ವ್ರತಧಾರಿಗಳು ಖುರಾನ್ ಪಾರಾಯಣದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಪ್ರತಿಯೋರ್ವ ಮುಸ್ಲಿಮರೂ ತಮ್ಮ ವಾರ್ಷಿಕ ಆದಾಯದ ಶೇಕಡ 21/2ಯಷ್ಟನ್ನು ಬಡ ಬಗ್ಗರಿಗಾಗಿ ದಾನ ನೀಡ ಬೇಕೆಂದು ಇಸ್ಲಾಂ ತಿಳಿಸಿದ್ದು, ಈ ದಾನಕ್ಕೆ ರಂಝಾನ್ ತಿಂಗಳು ಅತ್ಯಂತ ಸೂಕ್ತವೆನಿಸಿದೆ. ರಂಝಾನ್ ತಿಂಗಳಿನಲ್ಲಿ ಪುರುಷÀರು ಮಸೀದಿಗಳಲ್ಲಿ ಕುಳಿತು ದೈವ ಸ್ಮರಣೆಯಲ್ಲಿ ತೊಡಗಿಸಿಕೊಂಡರೆ, ಅಪಾರ ಪುಣ್ಯವಿದೆ. ಆದುದರಿಂದಲೇ ಈ ತಿಂಗಳಿನಲ್ಲಿ ರಾತ್ರಿ ವೇಳೆ ಮಸೀದಿಗಳಲ್ಲಿ ವಿಶೇಷ ‘ತರಾವೀ‘ ನಮಾಝ್ ನಡೆಯುತ್ತದೆ. ಎಲ್ಲಾ ಮಸೀದಿಗಳೂ ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತವೆ, ಭಕ್ತರಿಂದ ತುಂಬಿ ತುಳುಕುತ್ತವೆ. ರಂಝಾನ್ ತಿಂಗಳಿನಲ್ಲಿ ಮುಸ್ಲಿಮರ ಮನೆಗಳಲ್ಲಿ ಮೂವತ್ತು ದಿನಗಳ ಕಾಲವೂ ವಿಶೇಷ ತಿಂಡಿ ತಿನಿಸು ತಯಾರಿಸಲಾಗುತ್ತದೆ. ಈ ತಿಂಗಳಿನಲ್ಲಿ ಗಂಡಸರಿಗಿಂತಲೂ ಹೆಚ್ಚಾಗಿ ಶ್ರಮ ಪಡುವವರು ಮಹಿಳೆಯರು. ಮಕ್ಕಳ ಪಾಲನೆಯೊಂದಿಗೆ ಬೆಳಗ್ಗಿನ ಜಾವ ಬೇಗನೆ ಎದ್ದು, ಅಡುಗೆ ತಯಾರಿ, ಮನೆಯ ಇತರ ಕೆಲಸ ಕಾರ್ಯಗಳು ಹೀಗೆ ಮಹಿಳೆಯರು ವ್ರತ ಆಚರಿಸಿಕೊಂಡೇ ಹೆಚ್ಚು ಶ್ರಮಪಡುವದನ್ನು ಕಾಣಬಹುದಾಗಿದೆ. ಇನ್ನು ರಂಝಾನ್ ತಿಂಗಳು ಆರಂಭ ಗೊಂಡಂದಿನಿಂದ ಕೊನೆಗೊಳ್ಳುವ ತನಕವೂ ತಮ್ಮ