ಮಡಿಕೇರಿ, ಮೇ 10: ಮಡಿಕೇರಿ ನಗರ ನಾಗಾಲೋಟದಿಂದ ನಾಗರಿಕತೆಯತ್ತ ಸಾಗುತ್ತಿದೆ.., ರಸ್ತೆಗಳೆಲ್ಲ ಕಾಂಕ್ರಿಟ್ ಸ್ವರೂಪ ಕಾಣುತ್ತಿದೆ. ಪುಟ್ಟ ಜಿಲ್ಲೆಯೊಳಗಿರುವ ಸಣ್ಣ ನಗರ ಮಡಿಕೇರಿಯೊಳಗೆ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ.., ಹೆದ್ದಾರಿಯೆಂಬ ಹಾದಿಯಲ್ಲಿ ಸಾವಿನ ಸರಮಾಲೆಯನ್ನೂ ಕರೆದೊಯ್ಯುತ್ತಿದೆ. ಜಿಲ್ಲೆಯಲ್ಲಿ ಹಾದು ಹೋಗುವ ಅಂಕು-ಡೊಂಕಿನ ರಸ್ತೆಯುದ್ದಕ್ಕೂ ಪ್ರತಿನಿತ್ಯ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಮಡಿಕೇರಿ ನಗರದ ಹೃದಯ ಭಾಗ ಕೂಡ ಇದರಿಂದ ಹೊರತಾಗಿಲ್ಲ.

ಮಡಿಕೇರಿ ನಗರವನ್ನು ಪ್ರವೇಶಿಸುವ ಜ. ತಿಮ್ಮಯ್ಯ ವೃತ್ತದಲ್ಲಿ ನಾಲ್ಕು ರಸ್ತೆಗಳ ಸಂಗಮವಾಗುತ್ತಿದೆ. ಮೈಸೂರು, ಮೂರ್ನಾಡು, ಮಂಗಳೂರು ಕಡೆಯಿಂದ ಹಾಗೂ ಮಡಿಕೇರಿ ನಗರ ಪ್ರವೇಶಿಸುವ ರಸ್ತೆಗಳು ಇಲ್ಲಿ ಸೇರುತ್ತವೆ. ಈ ಪೈಕಿ ಮಂಗಳೂರು, ಮೈಸೂರು, ಮಡಿಕೇರಿ ರಸ್ತೆಗಳಿಗೆ ಕಾಂಕ್ರೀಟ್ ರಸ್ತೆ ವಿಭಜಕಗಳನ್ನು ಅಳವಡಿಸಲಾಗಿದೆ. ನೋಡಲು ಇದು