ವೀರಾಜಪೇಟೆ, ಜೂ. 23: ಭಾರತೀಯ ಜನತಾ ಪಾರ್ಟಿಯ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಸಮಿತಿಗೆ ಕೊಡಗು ಜಿಲ್ಲೆಯಿಂದ ಕಾರ್ಯದರ್ಶಿಯಾಗಿ ವೀರಾಜಪೇಟೆಯ ಜೋಕಿಂ ರಾಡ್ರಿಗಸ್ ಅವರನ್ನು ರಾಜ್ಯ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಂ ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.