ಮಡಿಕೇರಿ, ಜೂ. 21: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ 2016 ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕರಿಮೆಣಸು ಮತ್ತು ಅಡಿಕೆ ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ನೋಂದಣಿ ಮಾಡಿಕೊಂಡು ಭಾಗವಹಿಸಬಹುದು. ಹೆಸರು ನೋಂದಾಯಿಸಿಕೊಳ್ಳಲು ತಾ. 30 ಕೊನೆ ದಿನವಾಗಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ತಿಳಿಸಿದ್ದಾರೆ.

ಯೋಜನೆಯಡಿ ಕರಿಮೆಣಸುವಿಗೆ ವಿಮಾ ಮೊತ್ತ (ಪ್ರತಿ ಹೆಕ್ಟೇರಿಗೆ) ರೂ. 50 ಸಾವಿರ, ವಾಣಿಜ್ಯ ವಿಮಾ ಕಂತಿನ ದರ ಶೇ, 17.12, ರೈತರು ಪಾವತಿಸಬೇಕಾದ ಕಂತು ರೂ. 8,560 ಆಗಿರುತ್ತದೆ. ಇದರಲ್ಲಿ ಪ್ರತಿ ವಿಮಾ ಕಂತಿನ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ 3,030ರಿಯಾಯಿತಿ ಸಿಗಲಿದ್ದು ರೈತರು 2,500 ರೂ. ಪಾವತಿಸಬೇಕಾಗುತ್ತದೆ.

ಅಡಿಕೆಗೆ ವಿಮಾ ಮೊತ್ತ (ಪ್ರತಿ ಹೆಕ್ಟೇರಿಗೆ) ರೂ. 1,25000, ವಾಣಿಜ್ಯ ವಿಮಾ ಕಂತಿನ ದರ ಶೇ, 12.12 ರೈತರು ಪಾವತಿಸಬೇಕಾದ ಕಂತು ರೂ. 15,150 ಆಗಿರುತ್ತದೆ. ಇದರಲ್ಲಿ ಪ್ರತಿ ವಿಮಾ ಕಂತಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ತಲಾ 4,450 ರಿಯಾಯಿತಿ ಸಿಗಲಿದ್ದು ರೈತರು ರೂ. 6, 250 ರೂ. ಪಾವತಿಸಬೇಕಾಗುತ್ತದೆ

ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಜಿಲ್ಲೆಯಲ್ಲಿ ಬೆಳೆವಾರು ಸರಾಸರಿ ಬೆಳೆಸಾಲ ಮೊತ್ತಕ್ಕೆ ಸಮನಾಗಿರುತ್ತದೆ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಯೋಜನೆ ಅನುಷ್ಠಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರಗಳನ್ನು ಆನ್ ಲೈನ್ ಪೋರ್ಟಲ್ sಚಿmಡಿಚಿಞshಚಿಟಿe.ಟಿiಛಿ.iಟಿ ಮೂಲಕ ನೋಂದಾಯಿಸಬಹುದಾಗಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಯೂನಿವರ್ಸಲ್ ಸೋಂಪು ಜನರಲ್ ಇನ್ಸೂರೆನ್ಸ್ ಕಂಪೆನಿ ಅಧಿಕೃತ ವಿಮಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ, ಈ ಯೋಜನೆಯಡಿ ಒಳಪಡುವ ಎಲ್ಲಾ ಬೆಳೆಗಳಿಗೂ ಬೆಳೆ ಸಾಲ ಪಡೆಯುವ ರೈತರು ಹಾಗೂ ಬೆಳೆ ಸಾಲ ಪಡೆಯದ ರೈತರು ನೋಂದಾವಣೆ ಮಾಡಿಕೊಂಡು ಭಾಗವಹಿಸಬಹುದು, ನೋಂದಾಯಿಸಿಕೊಳ್ಳಲು ಕೊನೆಯ ದಿನ ತಾ. 30 ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲೆಯ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆಯ ಅಧಿಕಾರಿ ಸಿಬ್ಬಂದಿಗಳನ್ನು ಸಂಪರ್ಕಿಸಬಹುದಾಗಿದೆ. ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯು ಜಿಲ್ಲೆಯಲ್ಲಿ ಹೋಬಳಿ ಮತ್ತು ಬೆಳೆಗಳ ಪಟ್ಟಿ ತಯಾರಿಸಿದ್ದು, ಅದರಂತೆ ಮಡಿಕೇರಿ ತಾಲೂಕಿನ ಭಾಗಮಂಡಲ ಮತ್ತು ಸಂಪಾಜೆ ಹೋಬಳಿಗೆ ಕಾಳುಮೆಣಸು, ಅಡಿಕೆ, ನಾಪೋಕ್ಲು ಕಾಳುಮೆಣಸು ಬೆಳೆ, ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ, ಸೋಮವಾರಪೇಟೆ, ಸುಂಟಿಕೊಪ್ಪ ಹೋಬಳಿಗಳಲ್ಲಿ ಕಾಳುಮೆಣಸು ಬೆಳೆ, ವೀರಾಜಪೇಟೆ ತಾಲೂಕಿನ ಅಮ್ಮತಿ, ಪೊನ್ನಂಪೇಟೆ, ಶ್ರೀಮಂಗಲಕ್ಕೆ ಕಾಳುಮೆಣಸು ಹಾಗೂ ಅಡಿಕೆ ಮತ್ತು ಬಾಳೆಲೆ, ಹುದಿಕೇರಿ, ವೀರಾಜಪೇಟೆ ಹೋಬಳಿಗಳಿಗೆ ಕಾಳುಮೆಣಸು ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿರುತ್ತದೆ.