ಮಡಿಕೇರಿ, ಜೂ. 8: ಬಿದ್ದಂಡ ಪೂವಮ್ಮ ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆಯನ್ನು ತಾ. 16 ರಂದು ಬೆಳಿಗ್ಗೆ 9 ಗಂಟೆಯಿಂದ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ 2 ವಿಭಾಗಗಳಿವೆ. 6 ರಿಂದ 12 ವರ್ಷದ ಒಳಗಿನ ಕಿರಿಯರ ವಿಭಾಗ ಹಾಗೂ 13 ರಿಂದ 21 ವರ್ಷದ ಒಳಗಿನ ಹಿರಿಯರ ವಿಭಾಗ.
ಸ್ಪರ್ಧಿಗಳು ಶಾಲಾ-ಕಾಲೇಜುಗಳ ಮುಖೇನ ವಯಸ್ಸಿನ ದೃಢೀಕರಣ ಪತ್ರ ಸಹಿತ ಬರತಕ್ಕದ್ದು. ಕೊಡಗಿನ ಯಾವದೇ ಭಾಗದಿಂದ ಬರುವ ಸ್ಪರ್ಧಿಗಳ ಪ್ರಯಾಣಭತ್ಯೆ ಕೊಡಲಾಗುವದು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448366715, 9480653098, 9480557100ನ್ನು ಸಂಪರ್ಕಿಸಬಹುದು.