ವೀರಾಜಪೇಟೆ, ಜೂ. 18: ಕಳೆದ 6 ದಿನಗಳಿಂದ ಬಿದ್ದ ಮುಂಗಾರು ಮಳೆಯ ರಭಸಕ್ಕೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಹಿಂಬದಿಯ ಕಾಂಪೌಂಡ್ ನೆಲಸಮಗೊಂಡು ಸುಮಾರು ರೂ. 50,000 ನಷ್ಟ ಸಂಭವಿಸಿದೆ. ಕಾಂಪೌಂಡ್ಗೆ ಒತ್ತಾಗಿದ್ದ ವಿದ್ಯುತ್ ಕಂಬ ಮಳೆ ರಭಸಕ್ಕೆ ನೆಲಕ್ಕೆ ಉರುಳಿದೆ.
ವೀರಾಜಪೇಟೆ ವಿಭಾಗದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಕಳೆದೆರಡು ದಿನಗಳಿಂದ ಇಂದು ಬೆಳಗ್ಗಿನವರೆಗೆ ನಿರಂತರ ಸುರಿದಿದೆ. ಮೋಡÀ ಕವಿದ ವಾತಾವರಣ ಮುಂದುವರೆದಿದ್ದು, ಮುಂದೆಯೂ ಭಾರೀ ಮಳೆಯಾಗುವ ಲಕ್ಷಣಗಳಿವೆ. ಕಡಂಗಮರೂರು ಗ್ರಾಮದ ಜಂಕ್ಷನ್ ಬಳಿ ಸಂಜೆ ಭಾರೀ ಗಾತ್ರದ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮವಾಗಿ ಕಡಂಗ ಗ್ರಾಮದ ಕಾಲೋನಿ ಹಾಗೂ ಗ್ರಾಮದ ಭಾಗಶಃ ನಿವಾಸಿಗಳು ಇಡೀ ರಾತ್ರಿ ವಿದ್ಯುತ್ ಇಲ್ಲದೆ ಕಾರ್ಗತ್ತಲಿನಲ್ಲಿ ಪರದಾಡಬೇಕಾಯಿತು. ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಕಳೆದ 2015ರ ಅವಧಿಯಲ್ಲಿ ಜನವರಿಯಿಂದ ಜೂನ್ 13ರವರೆಗೆ ಒಟ್ಟು 12.9 ಇಂಚು ಮಳೆ ಸುರಿದಿದೆ. 8.7 ಇಂಚು ಮಳೆ ಸುರಿದಿದೆ. ಈ ಬಾರಿ ವಿಭಾಗಕ್ಕೆ 4.2 ಇಂಚುಗಳಷ್ಟು ಕಡಿಮೆ ಮಳೆ ಸುರಿದಿದೆ.