ನಾಪೆÇೀಕ್ಲು, ಮೇ 13: ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೊಡ್ಡಪುಲಿಕೋಟು ಮುಕ್ಕಾಟಿರ ಕುಟುಂಬದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ 17ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್‍ನ ಇಪ್ಪತ್ತೈದನೇ ದಿನದ ಪಂದ್ಯಾಟದಲ್ಲಿ ಮಲ್ಲಜ್ಜಿರ, ಚೀಯಕಪೂವಂಡ, ಕೊಂಗಂಡ, ಮಣವಟ್ಟಿರ, ಕಲ್ಯಾಟಂಡ, ಕಳಕಂಡ, ಬದಲೆರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಪೆÇರ್ಕೊವಂಡ ಮತ್ತು ಕಾಂಗೀರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಪೆÇರ್ಕೊವಂಡ ತಂಡ 4 ವಿಕೆಟ್ ನಷ್ಟಕ್ಕೆ 71 ರನ್‍ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕಾಂಗೀರ ತಂಡ 1 ವಿಕೆಟ್ ಕಳೆದುಕೊಂಡು 68 ರನ್‍ಗಳಿಸಿ ಸೋಲೊಪ್ಪಿಕೊಂಡಿತು. ಚೀಯಕಪೂವಂಡ ಮತ್ತು ಉಳುವಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೀಯಕಪೂವಂಡ ತಂಡ 3 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಉಳುವಂಗಡ ತಂಡ 8 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿ ಪರಾಭವಗೊಂಡಿತು. ಕೊಂಗಂಡ ಮತ್ತು ಮೂಕೊಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಂಗಡ ತಂಡ 3 ವಿಕೆಟ್ ನಷ್ಟಕ್ಕೆ 39 ರನ್ನಗಳಿಸಿದರೆ, ಅದನ್ನು ಹಿಂಬಾಲಿಸಿದ ಮೂಕೊಂಡ ತಂಡ 2 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಣವಟ್ಟಿರ ಮತ್ತು ಪೆÇರ್ಕೊವಂಡ ತಂಡಗಳ ನಡುವಿನ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮಣವಟ್ಟಿರ ತಂಡ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದರೆ, ಅದನ್ನು ಬೆನ್ನೆಟ್ಟಿದ ಪೆÇರ್ಕೊಂಡ ತಂಡ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಸೋತಿತು. ಕಲ್ಯಾಟಂಡ ಮತ್ತು ಕನ್ನಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕನ್ನಂಡ ತಂಡ 5 ವಿಕೆಟ್ ನಷ್ಟಕ್ಕೆ 42 ರನ್‍ಗಳ ಸವಾಲೊಡ್ಡಿತು. ಇದನ್ನು ಬೆನ್ನಟ್ಟಿದ ಕಲ್ಯಾಟಂಡ ತಂಡ 1 ವಿಕೆಟ್ ಕಳೆದುಕೊಂಡು 50 ರನ್ ಗಳಿಸಿ ಜಯಗಳಿಸಿತು. ಆಚೆಯಡ ಮತ್ತು ಕಳಕಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಳಕಂಡ ತಂಡ 7 ವಿಕೆಟ್ ನಷ್ಟಕ್ಕೆ 55 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಆಚೆಯಡ ತಂಡ 5 ವಿಕೆಟ್ ನಷ್ಟಕ್ಕೆ 20 ರನ್‍ಗಳಿಸಿ ಸೋತಿತು. ಮುಂಡಚಾಡಿರ ಮತ್ತು ಬದಲೆರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಡಚಾಡಿರ ತಂಡ 5 ವಿಕೆಟ್ ನಷ್ಟಕ್ಕೆ 38 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಬದಲೆರ ತಂಡ 2 ವಿಕೆಟ್ ನಷ್ಟಕ್ಕೆ 39 ರನ್‍ಗಳಿಸಿ ಮುಂಡಚಾಡಿರ ತಂಡದ ವಿರುದ್ಧ ವಿಜಯಪತಾಕೆ ಹಾರಿಸಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕಾಂಗೀರ ಅಂಜನ್, ಮಲ್ಲಂಗಡ ಸೋಮಣ್ಣ, ಉಳುವಂಗಡ ದೀಕ್ಷಿತ್, ಪೆÇರ್ಕೊವಂಡ ಸುನಿಲ್, ಕನ್ನಂಡ ಅಲಿನ್, ಮುಂಡಚಾಡಿರ ಮಂಜು, ಆಚೆಯಡ ಸುನಿಲ್ ಪಡೆದರು.