ಬಳ್ಳಾರಿ ಜೂ.23 : ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಜೆಸ್ಕಾ ಕಿರಿಯ ಎಂಜಿನಿಯರ್ ಡೆತ್ನೋಟ್ ಬರೆದು ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಪತ್ನಿಯ ಜೊತೆಗೂಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ನಗರದ ಬಂಡಿಹಟ್ಟಿ ಪ್ರದೇಶದಲ್ಲಿ ನಡೆದಿದೆ. ಮಕ್ಕಳಾದ ತನುಶ್ರೀ(4) ಪಾವನಿ(6)ಗೆ ವಿಷವುಣಿಸಿ ಎಂಜಿನಿಯರ್ ನಾಗರಾಜ್(40), ಪತ್ನಿ ರತ್ನಮ್ಮ(35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೇ 7 ದಿನ ರಜೆ ಹಾಕಿದ್ದೆ. ಅನುಮತಿ ಪಡೆಯದೇ ರಜೆ ಹಾಕಿದ್ದಕ್ಕೆ ಹಿರಿಯ ಅಧಿಕಾರಿಗಳು ನನ್ನನ್ನು ಕೆಲಸಕ್ಕೆ ಮರಳಿ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದರು. ಈ ಕಾರಣಕ್ಕೆ ನಾನು ಮನನೊಂದು ಮಕ್ಕಳಿಗೆ ವಿಷವುಣಿಸಿ ಪತ್ನಿಯ ಜೊತೆ ನೇಣಿಗೆ ಶರಣಾಗಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಜೆಸ್ಕಾನ ಅಧಿಕಾರಿಗಳಾದ ರಾಮಾಂಜನೇಯಲು, ಸತೀಶ, ಮತ್ತು ಜಗದೀಶ ಕಾರಣವೆಂದು ನಾಗರಾಜ್ ಪತ್ರದಲ್ಲಿ ಆರೋಪಿಸಿದ್ದಾರೆ.ನೇಣಿಗೆ ಶರಣಾಗುವ ಮುನ್ನ ನಾಗರಾಜ ಮೂರು ಪುಟುಗಳ ಡೆತ್ನೋಟ್ ಬರೆದು ಸ್ನೇಹಿತರಿಗೆ ವಾಟ್ಸಪ್ನಲ್ಲಿ ಕಳುಹಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಕೌಲಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.