ಮಡಿಕೇರಿ, ಜೂ. 21: ಜನ ಆರೋಗ್ಯ ಸಂಸ್ಥೆ ಎಪಿಡೀಮಿಯೋಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಇವರಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ “ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆ”ಯಡಿಯಲ್ಲಿ ಯುವ ಪರಿವರ್ತಕರ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹತಾ ಮಾನದಂಡಗಳು ಇಂತಿವೆ: ಪ್ರತಿ ಜಿಲ್ಲೆಗೆ ಯುವ ಪರಿವರ್ತಕರ ಸಂಖ್ಯೆ-05- ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ- ಯಾವದೇ ಪದವಿ ಹಾಗೂ ಮೇಲ್ಪಟ್ಟು, ಕನಿಷ್ಟ ವಯಸ್ಸು 21 ರಿಂದ 35 ವರ್ಷಗಳು. ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವದು ಅವಶ್ಯಕ, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ, ಹುಮ್ಮಸ್ಸನ್ನು ಹಾಗೂ ಉತ್ತಮ ಅಂತವ್ರ್ಯಕ್ತೀಯ, ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು.

ಅನುಭವ-ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ. ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು (ಃio ಆಚಿಣಚಿ) ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಸಲ್ಲಿಸಬೇಕು. ಕಿರುಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವದು. ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲದ ವಿಳಾಸ ತಿತಿತಿ.ಟಿimhಚಿಟಿs. ಞಚಿಡಿ.ಟಿiಛಿ.iಟಿ/ಟಿoಣiಜಿiಛಿಚಿಣioಟಿs.hಣm ಅಥವಾ ಕಚೇರಿ ದೂರವಾಣಿ ಸಂಖ್ಯೆ: 08272-228985 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಕೋರಿದ್ದಾರೆ.