ಸುಂಟಿಕೊಪ್ಪ, ಜೂ. 24: ಸುಂಟಿಕೊಪ್ಪ ಹೋಬಳಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಹೈಬ್ರೀಡ್ ಭತ್ತದ ಬೀಜ ಹಾಗೂ ಬ್ಯಾಟರಿ ಚಾಲಿತ ಸಿಂಪಡಣೆ ಯಂತ್ರ ದೊರಕಲಿದ್ದು, ರೈತರ ಕೃಷಿ ಭೂಮಿಯಲ್ಲಿನ ಮಣ್ಣಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವದು. ರೈತರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಸುಂಟಿಕೊಪ್ಪ ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ ತಿಳಿಸಿದ್ದಾರೆ.