ಮಡಿಕೇರಿ, ಜೂ. 25: ವಾಂಡರರ್ಸ್ ಕ್ಲಬ್ ಹಾಗೂ ಸ್ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯಾ ವತಿಯಿಂದ ಜಂಟಿಯಾಗಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಾಯಿ ಕಟ್ಟಡದಲ್ಲಿ ಏರ್ಪಡಿಸಲಾಗಿತ್ತು.

ಯೋಗ ದಿನಾಚರಣೆಯಲ್ಲಿ 45 ಬಾಲಕಿಯರು, ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ರವಿ ಹಾಗೂ ಅಥ್ಲೆಟಿಕ್ಸ್ ತರಬೇತುದಾರ ಉಮೇಶ್ ಮತ್ತು ಹಾಕಿ ತರಬೇತುದಾರರು, ವಾಂಡರರ್ಸ್ ಕ್ಲಬ್‍ನ ಸದಸ್ಯ ಬಾಬು ಸೋಮಯ್ಯ ಭಾಗವಹಿಸಿದ್ದರು.

ಯೋಗ ಶಿಕ್ಷಕ ಎಸ್.ಟಿ. ವೆಂಕಟೇಶ, ಯೋಗ ಪ್ರದರ್ಶನ ಮಾಡಿ ಯೋಗದ ಉಪಯೋಗಗಳನ್ನು ತಿಳಿಸಿಕೊಟ್ಟರು.