ಕೂಡಿಗೆ, ಜೂ. 26: ಇಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಸ್ವ-ಉದ್ಯೊಗ ತರಬೇತಿ ಸಂಸ್ಥೆ ವತಿಯಿಂದ ಕೊಡಗು ಹಾಗೂ ಕರ್ನಾಟಕದ ಇತರೇ ಎಲ್ಲಾ ಜಿಲ್ಲೆಗಳ 18 ರಿಂದ 45 ವರ್ಷದೊಳಗಿನ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಕೂಡಿಗೆ-ಕೊಡಗು ಜಿಲ್ಲೆಯ ಕಾಬ್ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜೂನ್-ಜುಲೈ ತರಬೇತಿ ಕಾರ್ಯಕ್ರಮಗಳು: ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿ (30 ದಿನಗಳು), ಹೊಲಿಗೆ ತರಬೇತಿ-ಮಹಿಳೆಯರಿಗೆ (21 ದಿನಗಳು), ಫ್ಯಾಶನ್ ಡಿಸೈನಿಂಗ್-ಮಹಿಳೆಯರಿಗೆ (30 ದಿನಗಳು).
ಆಗಸ್ಟ್ ತರಬೇತಿ ಕಾರ್ಯಕ್ರಮಗಳು: ಕಂಪ್ಯೂಟರ್ ಬೇಸಿಕ್ ಮತ್ತು ಡಿ.ಟಿ.ಪಿ. (45 ದಿನಗಳು), ಎಲೆಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳ ನಿರ್ವಹಣೆ ಹಾಗೂ ರಿಪೇರಿ (ಟಿ.ವಿ ಫ್ಯಾನ್ ಮಿಕ್ಸಿ) (30 ದಿನಗಳು).
ಸೆಪ್ಟೆಂಬರ್ ತರಬೇತಿ ಕಾರ್ಯಕ್ರಮಗಳು: ಜಾಮ್, ಜೆಲ್ಲಿ ಮತ್ತು ಇತರ ಹಣ್ಣಿನ ಪಾನೀಯಗಳ ತಯಾರಿಕೆ (10 ದಿನಗಳು), ಆಟೋಮೊಬೈಲ್ ಎಲೆಕ್ಟ್ರೀಕಲ್ (30 ದಿನಗಳು) ತರಬೇತಿ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಇದಲ್ಲದೆ ಮುಂದಿನ ದಿನಗಳಲ್ಲಿ ಗ್ರಾಮೀಣ ಉದ್ಯಮಶೀಲತಾ ತರಬೇತಿ (12 ದಿನಗಳು) ಸಿಸಿ ಕ್ಯಾಮೆರಾ ಅಳವಡಿಕೆ, ಮೆನ್ಸ್ ಪಾರ್ಲರ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಡಾಟಾ ಎಂಟ್ರಿ ಆಪರೇಶನ್, ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ಸಾಪ್ಟ್ವೇರ್, ಟ್ಯಾಲಿ, ಹೈನುಗಾರಿಕೆ, ಅಣಬೆ ಬೇಸಾಯ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೇಣದ ಬತ್ತಿ ತಯಾರಿಕೆ, ನರ್ಸರಿ ನಿರ್ವಹಣೆ, ಹೂ ಗಿಡಗಳ ಬೇಸಾಯ, ಟೇಲರಿಂಗ್ ತರಬೇತಿ, ಮೊಬೈಲ್ ರಿಪೇರಿ, ಫೋಟೋಗ್ರಫಿ, ಹೀಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಈ ವರ್ಷದ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳು ಹಾಗೂ ದೊರೆಯುವ ಸೌಲಭ್ಯಗಳು ಹಾಗೂ ಇನ್ನಿತರ ಮಹತ್ವದ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವದು.
ತರಬೇತಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿ ಹಾಗೂ ಕನ್ನಡ ಬಲ್ಲ ಯುವಕ-ಯುವತಿಯರು ಅರ್ಜಿಯನ್ನು ಕಾಬ್ಸೆಟ್ ಸಂಸ್ಥೆಯಿಂದ ಪಡೆದು ನಿರ್ದೇಶಕರು ಕಾಬ್ಸೇಟ್ ಸಂಸ್ಥೆ-ಕೂಡಿಗೆ, ಕೊಡಗು ಇವರಿಗೆ ಸಲ್ಲಿಸಬೇಕಾಗಿರುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುವದು ಹಾಗೂ ಎಲ್ಲಾ ತರಬೇತಿಗಳಿಗೆ ಊಟ ಮತ್ತು ವಸತಿ ಉಚಿತ ಆಗಿರುತ್ತದೆ. ಹಾಗೆಯೇ ಆಸಕ್ತ ಅಭ್ಯರ್ಥಿಗಳಿಗೆ ಬ್ಯಾಂಕಿನ ಮೂಲಕ ಹಣಕಾಸು ನೆರವು ಪಡೆಯಲು ಮಾರ್ಗದರ್ಶನ ನೀಡಲಾಗುವದು ಎಂದು ಸಂಸ್ಥೆಯ ನಿರ್ದೇಶಕ ನಾಗೇಂದ್ರ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08276-278729,278730, ನಾಗೇಂದ್ರ -9901223560, ಅನಿಲ್ ಕುಮಾರ್- 9481112729, ಸಲಾವುದ್ದಿನ್-9449402081.