ಸುಂಟಿಕೊಪ್ಪ, ಜೂ. 23: ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾದ ವಯೋವೃದ್ಧ ಕೃಷ್ಣಪ್ಪ ಎಂಬವರು ನಾಪತ್ತೆಯಾಗಿದ್ದಾರೆ. ಕಲ್ಲೂರು ಗ್ರಾಮದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣಪ್ಪ (65) ಕಳೆದ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈ ವ್ಯಕ್ತಿಯು ಹಲವಷ್ಟು ಬಾರಿ 2-3 ದಿನಗಳ ಕಾಲ ಮನೆಯಿಂದ ದೂರ ಉಳಿದುಕೊಂಡು ಬರುತ್ತಿದ್ದ ವ್ಯಕ್ತಿ ಮನೆಗೆ ಹಿಂತಿರುಗದಿರುವದನ್ನು ಗಮನಿಸಿರುವ ಆತನ ಪತ್ನಿ ಲಕ್ಷ್ಮಿ ಹಾಗೂ ಪುತ್ರಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಲಕ್ಷ್ಮಿ ಅವರ ಮೊಬೈಲ್ 7337689098 ಗೆ ಕರೆ ಮಾಡುವಂತೆ ಕೋರಲಾಗಿದೆ.