ಕುಶಾಲನಗರ, ಮೇ 18: ಇಂದು ಬೆಳಿಗ್ಗೆ ಕುಶಾಲನಗರ ಬಳಿ ನಡೆದ ಕಾರು ಅಪಘಾತದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಪತ್ನಿ ಕುಂತಿ ಬೋಪಯ್ಯ ಅಲ್ಪಸ್ವಲ್ಪ ಗಾಯಗ ಳೊಂದಿಗೆ ಪಾರಾಗಿದ್ದಾರೆ. ಕುಶಾಲನಗರಕ್ಕೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಕುಂತಿ ಬೋಪಯ್ಯ ಅವರ ಕಾರು ಜಖಂಗೊಂಡಿದೆ.

ಕುಂತಿ ಬೋಪಯ್ಯ ಅವರು ಮಡಿಕೇರಿಯಿಂದ ಕುಶಾಲನಗರಕ್ಕೆ ಕಾರಿನಲ್ಲಿ (ಕೆಎ 12 ಪಿ 7029) ಬರುತ್ತಿದ್ದ ಸಂದರ್ಭ ಗುಡ್ಡೆಹೊಸೂರು ಬಳಿ ಈ ಘಟನೆ ಸಂಭವಿಸಿದೆ. ಹಿಂದಿನಿಂದ ಬರುತ್ತಿದ್ದ (ಕೆಎಲ್ 12 ಇ 2287) ಕಾರು ಡಿಕ್ಕಿಯಾಗಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿದ್ದು ಮಹಜರು ನಡೆಸಿ ಮೊಕದ್ದಮೆ ದಾಖಲಾಗಿದೆ. ಡಿಕ್ಕಿಪಡಿಸಿದ ಕಾರು ಚಾಲಕ ಬಿನ್ನು ವಿ ಚಾಕೊ ಎಂಬಾತ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಅನೂಪ್ ಮಾದಪ್ಪ ತಿಳಿಸಿದ್ದಾರೆ.