ಮಡಿಕೇರಿ, ಜೂ. 20: ದೇವಟ್ ಪರಂಬು ಶಿಲಾಶಾಸನ ಭಗ್ನ ಕುರಿತು ಭಾರೀ ವಿವಾದವೆದ್ದಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆ ಹರಿಸಲು ಜನಪ್ರತಿನಿಧಿಗಳು ಕಾಳಜಿವಹಿಸಿರುವದು ಸಂತಸ ತಂದಿದೆ. ಈ ಪ್ರಕರಣ ಇಷ್ಟೊಂದು ತೀವ್ರ ಸ್ವರೂಪ ಪಡೆಯಲು ಬಿಡಬಾರದಿತ್ತೆಂದು ಜಿಲ್ಲಾ ಪ್ರಗತಿಪರ ಕ್ರಿಯಾ ಸಮಿತಿಯ ಅಧ್ಯಕ್ಷ ಪೊರಿಮಂಡ ದಿನಮಣಿ ಪೂವಯ್ಯ ಅಭಿಪ್ರಾಯಿಸಿದ್ದಾರೆ.ದೇವಟ್ಪರಂಬು ಸರ್ಕಾರಿ ಜಾಗವಾಗಿದ್ದು, ಅದು ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲದ ಕಾರಣ ಈ ಕಿಡಿಗೇಡಿಗಳೊಂದಿಗೆ ಮಾತುಕತೆಯಾಡಕೂಡದು.
ರಾಷ್ಟ್ರೀಯ ಸ್ಮಾರಕ ನಿರ್ಮಾಣದ ಬೇಡಿಕೆಯಿಟ್ಟ ಸಿಎನ್ಸಿಯನ್ನು ಸರ್ಕಾರದÀ ಜೊತೆ ವ್ಯವಹರಿಸಿ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಸಂಪೂರ್ಣ ಸಹಕರಿಸಬೇಕಿದೆ.ಸಂಧಾನ ಮಾಡಲು ಇದೇನು ಯುದ್ಧ ಭೂಮಿಯೇ ಎಂದು ಪ್ರಶ್ನಿಸಿರುವ ಅವರು, ಕೊಡವರಿಗೂ ಇನ್ನೊಂದು ಜನಾಂಗಕ್ಕೂ ಯುದ್ಧ ನಡೆದಿದೆಯೇ? ಅಂದಮೇಲೆ ಮಾತುಕತೆಯೇ ಅಪ್ರಸ್ತುತವಲ್ಲವೆ? ಎಂದು ಹೇಳಿದ್ದಾರೆ. ಸಿಎನ್ಸಿ ಮತ್ತು ಕೊಡವರು ಕೊಡವರ ಹಕ್ಕುಗಳನ್ನೆಲ್ಲ ಪ್ರತಿಪಾದಿಸಿದಾಗೆಲ್ಲ ತಡೆ ಮಾಡಿ ಕ್ಯಾತೆ ತೆಗೆಯುವ ಜನಾಂಗ ಯಾವದೆಂದು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ಅಗತ್ಯವೆನಿಸುತಿದೆ. ಶಿಲಾಶಾಸನ ಭಗ್ನಗೊಳಿಸಿ ಅಶಾಂತಿ ಕದಡಿರುವವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಆಗಬೇಕಿದೆ ಎಂದು ಒತ್ತಾಯಿಸಿದರು.