ಮಡಿಕೇರಿ, ಮಾ. 28: ಸಿ.ಎನ್.ಸಿ. ಆಶ್ರಯದಲ್ಲಿ ನಿನ್ನೆ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ದೇವಟ್ ಪರಂಬ್ ಹತ್ಯಾಕಾಂಡ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು ಹಾಗೂ ಜಾಗತಿಕ ಹೋಲೋಕಾಸ್ಟ್ ಮ್ಯೂಸಿಯಂ ಸ್ಥಾಪಿಸಬೇಕೆಂದು ಮತ್ತು ವಿಶ್ವ ಸಂಸ್ಥೆಯ ಹೋಲೋಕಾಸ್ಟ್ ರಿಮೆಂಬರೆನ್ಸ್ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ದೇವಟ್ ಪರಂಬ್ ಹತ್ಯಾಕಾಂಡದಲ್ಲಿ 1785 ಡಿಸೆಂಬರ್ 13 ರಂದು ಚಂಚಲ ಟಿಪ್ಪುವಿಗೆ ಸೇನಾ ಬೆಂಬಲ, ರಾಜತಾಂತ್ರಿಕ ಬೆಂಬಲ ನೀಡಿ ತನ್ನ ಸೇನೆಯೊಂದಿಗೆ ನೇರವಾಗಿ ಭಾಗವಹಿಸಿದ್ದ ಫ್ರಾನ್ಸ್ ಕೊಡವರ ಕಗ್ಗೊಲೆ ನಡೆಸಿದ್ದಕ್ಕಾಗಿ ಕೊಡವರ ಬಹಿರಂಗ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಹಾಗೂ ಜಾಟ್ ಮೀಸಲಾತಿಯೊಂದಿಗೆ ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಖಾತರಿಗಾಗಿ ಮಸೂದೆ ಮಂಡನೆಗೆ ಆಗ್ರಹಿಸಿ ಮಾನವ ಸರಪಳಿ ನಡೆಯಿತು. ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವ ವಹಿಸಿದ್ದರು.