ನಾಪೆÇೀಕ್ಲು, ಜೂ. 21: ಮೂರು ತಿಂಗಳ ಹಿಂದೆ ಚೆಯ್ಯಂಡಾಣೆ ಗ್ರಾಮದ ಶಾಂತಪ್ಪ ರೈ ಎಂಬವರ ಮೇಲೆ ಹಣದ ವಿಚಾರಕ್ಕಾಗಿ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಅದೇ ಗ್ರಾಮದ ಆನಂದ, ಗಿರೀಶ್, ಕಿಶು, ಸತೀಶ್ ಮತ್ತು ಗಣಪತಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಅವರ ಬಂಧನಕ್ಕೆ ನಾಪೆÇೀಕ್ಲು ಪೆÇಲೀಸರು ತೀವ್ರ ಶೋಧ ನಡೆಸುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಅವರು ನ್ಯಾಯಾಲಯಕ್ಕೆ ಶರಣಾಗಿರುವ ಬಗ್ಗೆ ಪೆÇಲೀಸರು ತಿಳಿಸಿದ್ದಾರೆ. ಅವರನ್ನು ವಶಕ್ಕೆ ಪಡೆದುಕೊಂಡ ನಾಪೆÇೀಕ್ಲು ಪೆÇಲೀಸರು ಸ್ಥಳ ಮಹಜರು ನಡೆಸಿ, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ತಲೆ ಮರೆಸಿಕೊಳ್ಳಲು ಸಹಕರಿಸಿದ ವ್ಯಕ್ತಿಗಳ ಬಗ್ಗೆ ವಿಚಾರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವದೆಂದು ಠಾಣಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.