ಸಿದ್ದಾಪುರ, ಜೂ. 7: ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತಿದ್ದ ಸಮೀಪದ ಅವರೆಗುಂದ ಹಾಡಿಗೆ ಕೊನೆಗೂ ನೀರಿನ ಭಾಗ್ಯ ಸಿಕ್ಕಿದೆ.

ಗ್ರಾಮಸ್ಥರು ಅವರೆಗುಂದ ಹಾಡಿಯಲ್ಲಿ ನೀರಿನ ಸಮಸ್ಯೆಯ ಬಗ್ಗೆ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಅವರ ಗಮನಕ್ಕೆ ತರಲಾಗಿತ್ತು. ಇದೀಗ ಕೊಳವೆಬಾವಿ ಕೊರೆಯುವ ಮೂಲಕ ನೀರಿನ ಸೌಲಭ್ಯ ಒದಗಿಸಲಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ ಟ್ಯಾಂಕ್‍ಗೆ ನೀರಿನ ವ್ಯವಸ್ಥೆ ಇಲ್ಲದ ಕಾರಣ ಹಾಡಿ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದರು. ಇದನ್ನರಿತ ಜಿ.ಪಂ. ಸದಸ್ಯೆ ನೂತನ ಕೊಳವೆ ಬಾವಿ ತೆಗೆಸುವ ಮೂಲಕ ಗ್ರಾಮಸ್ಥರಿಗೆ ನೀರಿನ ಸೌಲಭ್ಯವನ್ನು ಒದಗಿಸಿದ್ದಾರೆ.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ, ಸದಸ್ಯರಾದ ಸುಶೀಲ, ಸರೋಜ, ಪೂವಮ್ಮ, ಶೀಲ, ರೆಜಿತ್ ಕುಮಾರ್, ಪ್ರೇಮ, ಮಂಜುನಾಥ, ಮಾಜಿ ಉಪಾಧ್ಯಕ್ಷ ಮೂಸ ಸೇರಿದಂತೆ ಇತರರು ಇದ್ದರು.

-ವಾಸು ಆಚಾರ್ಯ