ಮಡಿಕೇರಿ, ಜೂ. 18: ನಿನ್ನೆಯಷ್ಟೇ ಕೊಡ್ಲಿಪೇಟೆ ಹೇಮಾವತಿ ನದಿ ಪ್ರದೇಶದಲ್ಲಿ ವಿವಿಧ ಇಲಾಖಾಧಿಕಾರಿಗಳು ಧಾಳಿ ನಡೆಸಿ 30 ಲಾರಿಗಳಷ್ಟು ಸಂಗ್ರಹಿಸಿದ್ದ ಅಕ್ರಮವಾಗಿ ಸಾಗಿಸಲು ಸಿದ್ಧವಾಗಿದ್ದ ಮರಳನ್ನು ವಶಪಡಿಸಿಕೊಂಡ ಬೆನ್ನಲ್ಲೆ ಇಂದು ಮತ್ತೆ ಕೊಡ್ಲಿಪೇಟೆಯ ಕೆರೆಕೊಡ್ಲಿ ವಿಭಾಗದಲ್ಲಿ 23 ಲಾರಿಗಳಷ್ಟು ಅಕ್ರಮ ಸಂಗ್ರಹಿತ ಮರಳನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಧಾಳಿ ನಡೆಸಿ ವಶಪಡಿಸಿಕೊಂಡಿರು ವದಾಗಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಡಾ. ಎಂ.ಜೆ. ಮಹೇಶ್ ‘ಶಕ್ತಿ'ಗೆ ಮಾಹಿತಿಯಿತ್ತಿದ್ದಾರೆ.