ಸೋಮವಾರಪೇಟೆ, ಮೇ 17: ಕಾಡಾನೆ ಧಾಳಿಯಿಂದ ಮೃತಪಟ್ಟ ಮಹಿಳೆಯೋರ್ವರ ಕುಟುಂಬಕ್ಕೆ ರೂ. 4 ಲಕ್ಷ ಪರಿಹಾರ ಧನದ ಚೆಕ್ಕನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಮ್ಮ ಕಚೇರಿಯಲ್ಲಿ ವಿತರಿಸಿದರು.
ಕಳೆದ ಕೆಲ ತಿಂಗಳ ಹಿಂದೆ ಬಸವನಹಳ್ಳಿ ಗ್ರಾಮದ ಕಾಳಮ್ಮ (50) ಎಂಬವರು ಕಾಡಾನೆ ಧಾಳಿಯಿಂದ ಮೃತಪಟ್ಟಿದ್ದರು. ಮೃತೆ ಕಾಳಮ್ಮ ಅವರ ಪತಿ ರಘು ಚೆಕ್ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಂಜನ್ ಮೃತರ ಕುಟುಂಬಕ್ಕೆ ಈಗಾಗಲೇ ರೂ. 1 ಲಕ್ಷ ನೀಡಲಾಗಿದೆ. ಇದೀಗ ರೂ. 4 ಲಕ್ಷ ಚೆಕ್ಕನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಆನೆ ಧಾಳಿ ಹೆಚ್ಚಾಗುತ್ತಿದ್ದು, ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆಂದು ವಿಷಾಧಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಕುಶಾಲನಗರ ವಲಯ ಅರಣ್ಯಾಧಿಕಾರಿ ಚಿಣ್ಣಪ್ಪ ಹಾಜರಿದ್ದರು.