ನಾಪೆÇೀಕ್ಲು, ಜೂ. 4: ಕೊಡವರ ನರಮೇಧ ನಡೆದ ಅಯ್ಯಂಗೇರಿಯ ದೇವಟ್ ಪರಂಬುವಿನಲ್ಲಿ ಮಡಿದ ಕೊಡವ ಹುತಾತ್ಮರ ನೆನಪಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಿರ್ಮಿಸಲಾದ ಸ್ಮಾರಕವನ್ನು ಧ್ವಂಸ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಆಗ್ರಹಿಸಿದ್ದಾರೆ.
ಕೊಡವ ಕುಟುಂಬದ ಸದಸ್ಯರನ್ನು ಮೈಸೂರಿನ ರಾಜನಾಗಿದ್ದ ಟಿಪ್ಪು ಮೋಸದಿಂದ ಇಲ್ಲಿ ಹತ್ಯೆಗೈದಿದ್ದಾನೆ. ಮಡಿದ ಹುತಾತ್ಮ ಕೊಡವರಿಗೆ ಶೃದ್ಧಾಂಜಲಿ, ಗೌರವ ಮತ್ತು ಎಡೆಯಿಡುವ ಉದ್ದೇಶದಿಂದ ಸಿಎನ್ಸಿ ಸ್ಮಾರಕ ನಿರ್ಮಿಸಿತ್ತು. ಅದನ್ನು ಸಹಿಸದ ಕಿಡಿಗೇಡಿಗಳು ಸ್ಮಾರಕ ಧ್ವಂಸ ಮಾಡಿ ಕೊಡವರ ಸ್ವಾಭಿಮಾನವನ್ನು ಕೆಣಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಮಾರಕವನ್ನು ಪುನರ್ ನಿರ್ಮಾಣ ಮಾಡಬೇಕು. ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು ಮತ್ತು ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದರು.