ನಾಪೆÇೀಕ್ಲು, ಜೂ. 30: ಸುತ್ತಲೂ ಸುಂದರವಾದ ಮುಗಿಲೆತ್ತರದ ಬೆಟ್ಟಗಳು, ಎಲ್ಲಿ ನೋಡಿದರೂ ಸಮೃದ್ಧ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಧುಮುಕುತ್ತಿರುವ ಮನೋಹರವಾದ ಜಲರಾಶಿ, ಹಾಲ್ನೊರೆಯುಕ್ಕಿಸುತ್ತಾ ವೈಯಾರ ದಿಂದ ಹರಿಯುವ ತೊರೆ, ಈ ಭೋರ್ಗರೆತದ ಮೊರೆತದಿಂದಾಗಿ ಸಮೀಪದಲ್ಲಿದ್ದರೂ ಕೂಗಿ ಮಾತನಾಡುವ ಪರಿಸ್ಥಿತಿ.

ಆ ನೀರು ಧುಮುಕುವ ರಭಸದಿಂದ ಮೇಲೇಳುವ ನೊರೆಯ ಹನಿ, ಹನಿ ಇಬ್ಬನಿಯಾಗಿ ಮುಸುಕುವ ವಾತಾವರಣ ವರ್ಣಿಸಲಸಾಧ್ಯ, ಊಹೆಗೂ ನಿಲುಕದ ಚಿತ್ರಣ. ಇದು ಕೊಡಗಿನ ಹೆಸರುವಾಸಿ ಚೇಲಾವರ ಜಲಪಾತದ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಈ ಮಾತನಾಡುವ ಪರಿಸ್ಥಿತಿ.

ಆ ನೀರು ಧುಮುಕುವ ರಭಸದಿಂದ ಮೇಲೇಳುವ ನೊರೆಯ ಹನಿ, ಹನಿ ಇಬ್ಬನಿಯಾಗಿ ಮುಸುಕುವ ವಾತಾವರಣ ವರ್ಣಿಸಲಸಾಧ್ಯ, ಊಹೆಗೂ ನಿಲುಕದ ಚಿತ್ರಣ. ಇದು ಕೊಡಗಿನ ಹೆಸರುವಾಸಿ ಚೇಲಾವರ ಜಲಪಾತದ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಜಲಪಾತಗಳು ಕೊಡಗಿನಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವದನ್ನು ನೋಡುವದೇ ರೋಮಾಂಚನ.

ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಅಬ್ಬಾ! ಆ ಜಲಧಾರೆಯ ಸೌಂದರ್ಯ ವರ್ಣಾನಾತೀತ. ಸುಮಾರು 80 ಅಡಿ ಅಗಲವಾಗಿ 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ನೋಡುಗರಿಗೆ ಬೆಳ್ಮುಗಿಲ ಧಾರೆಯಾಗಿ ಧಾವಿಸುವಂತೆ ತೋರುತ್ತದೆ. ತಡಿಯಂಡಮೋಳ್ ಶಿಖರದಿಂದ ಹುಟ್ಟುವ ಈ ಜಲಪಾತ ಬೇಸಿಗೆಯಲ್ಲಿ ನಿತ್ರಾಣವಾಗಿರುವಂತೆ ಸಣ್ಣಗೆ ಹರಿಯುತ್ತಾ ಮಳೆಗಾಲ ಪ್ರಾರಂಭವಾದೊಡನೆ ದಷ್ಟಪುಷ್ಟವಾಗಿ ತನ್ನ ರಭಸವನ್ನು ಹೆಚ್ಚಿಸಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಚೆಯ್ಯಂಡಾಣೆ ಮುಖ್ಯ ರಸ್ತೆಯಿಂದ 5 ಕಿ. ಮೀ. ದೂರದ ಚೇಲಾವರ ಗ್ರಾಮದಲ್ಲಿ ಭೋರ್ಗರೆಯುತ್ತಾ, ಧುಮುಕುತ್ತಾ ತನ್ನದೇ ಆದ ವೈಶಿಷ್ಟ್ಯದಿಂದ ಸಾಗುವ ಈ ಜಲರಾಶಿಯ ಸ್ಥಳಕ್ಕೆ ಚೆಯ್ಯಂಡಾಣೆಯಿಂದ ವಾಹನಗಳಲ್ಲಿ ಕ್ರಮಿಸಿದರೂ ಸ್ವಲ್ಪ ಹಾದಿ ಮಾತ್ರ ಕೊರಕಲು ಕಲ್ಲು, ಅಂಕು ಡೊಂಕು, ತಗ್ಗು ದಿಣ್ಣೆಗಳಿಂದ ಕೂಡಿದೆ. ನಿತ್ಯ ಹರಿದ್ವರ್ಣದ ದಟ್ಟವಾದ ಕಾಡುಗಳಿಂದಾವೃತವಾದ ತೂಂಗ್ ಕೊಲ್ಲಿ ಎಂಬಲ್ಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕರಿ ಕಲ್ಲು ರಾಶಿಯ ನಡುವಿನ ರುದ್ರ ರಮಣೀಯ ಸೋಮನ ಜಲಪಾತದ ದರ್ಶನವಾಗುತ್ತದೆ. ಈ ಜಲಧಾರೆ ಹರಿದು ಬರುವ ಬಂಡೆಗಳು ಪಕ್ಕನೆ ನೋಟಕ್ಕೆ ಆಮೆಯ ಬೆನ್ನಿನಂತೆ ಕಾಣುವದರಿಂದ ಇದನ್ನು ‘ಆಮೆಪಾರೆ’ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಪ್ರವಾಸಿಗರ ಕಲರವ: ಈ ಜಲಪಾತದ ಸೌಂದರ್ಯಕ್ಕೆ ಮಾರು ಹೋದ ಪ್ರವಾಸಿಗರು ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಭೇಟಿ ನೀಡುತ್ತಿರುವವರಲ್ಲಿ ಪಡ್ಡೆ ಹುಡುಗರೇ ಹೆಚ್ಚು ಎನ್ನುತ್ತಿದ್ದಾರೆ ಸ್ಥಳೀಯ ಜನ. ಬಿರುಸಿನ ಮಳೆ, ಕೊರೆವ ಚಳಿಯನ್ನು ಲೆಕ್ಕಿಸದೆ ಪ್ರವಾಸಿಗರು ಇಲ್ಲಿ ಜಲ ಕ್ರೀಡೆಯಾಡುತ್ತಿರುವದು ಹೆಚ್ಚಿಗೆ ಕಂಡುಬರುತ್ತಿದೆ.

ಜಲಪಾತದ ಸನಿಹದಲ್ಲಿ ನಿಂತು ನೋಡುತ್ತ ಅವರದೇ ಲೋಕದಲ್ಲಿ ಆನಂದದಿಂದ ವಿಹರಿಸುವಾಗ, ಆ ಸುಂದರ ನೋಟಕ್ಕೆ ಮಾರು ಹೋಗುವ ಭರದಲ್ಲಿ ನೀರಿಗಿಳಿದು ಅಪಾಯ ತಂದುಕೊಳ್ಳದೆ ಎಚ್ಚರದಿಂದ, ಜವಾಬ್ದಾರಿಯಿಂದ ವರ್ತಿಸಬೇಕಿದೆ.

- ಪಿ.ವಿ. ಪ್ರಭಾಕರ್ / ದುಗ್ಗಳ