ಮಡಿಕೇರಿ, ಜೂ. 18 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಬಿ.ಇ.ಎಲ್. ಕೊಡವ ಅಸೋಷಿಯೇಷನ್ ಜಂಟಿ ಆಶ್ರಯದಲ್ಲಿ ತಾ. 19 ರಂದು ಮಧ್ಯಾಹ್ನ 3.30 ಗಂಟೆಗೆ ಬೆಂಗಳೂರಿನ ಜಾಲಹಳ್ಳಿ, ಬಿ.ಇ.ಎಲ್. ಕಲಾಕ್ಷೇತ್ರದಲ್ಲಿ 15 ದಿನಗಳ ಆಟ್-ಪಾಟ್ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಬಿ.ಇ.ಎಲ್ ಕೊಡವ ಅಸೋಷಿಯೇಷನ್‍ನ ಅಧ್ಯಕ್ಷ ಚೇಮಿರ ಸಿ.ಮುತ್ತಣ್ಣ, ಬಿ.ಇ.ಎಲ್ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಆಟ್-ಪಾಟ್ ತರಬೇತುದಾರರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.