ಮೂರ್ನಾಡು, ಜೂ. 9: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.ಇಲ್ಲಿನ ಶ್ರೀ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸಂಘದ ಸದಸ್ಯತ್ವ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಭಜರಂಗದಳ ಸಂಚಾಲಕ ಅಜಿತ್ ಕುಮಾರ್ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ವಿ. ಸುಬ್ರಮಣಿ, ಖಜಾಂಚಿ ಮೊಫಲ್, ಸದಸ್ಯರುಗಳಾದ ಮೋನಿಷ್, ಕೆ. ಗೋಪಿ, ಕೆ.ಕೆ. ಕುಮಾರ್, ಟಿ.ಪಿ. ಪರಮೇಶ್ವರ್, ಲೋಹಿದಾಸ್, ಕೆ.ವಿ. ಚಂದ್ರ, ನಿರ್ದೇಶಕರುಗಳಾದ ಕೆ.ಟಿ.ಕೆ. ಮೋಹನ್, ಕೆ.ಕೆ. ಗೋವಿಂದ್, ಎನ್.ಕೆ. ಮುರಳಿ, ಪಿ.ಕೆ. ಬಾಸ್ಕರ್ ಹಾಜರಿದ್ದರು. 1ನೇ ತರಗತಿಯಿಂದ 10ನೇ ತರಗತಿವರೆಗಿನ 110 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.