ಮಡಿಕೇರಿ, ಜೂ. 7: ಭಾರತೀಯ ಸಂಬಾರ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಏಲಕ್ಕಿ ಸಸಿ ಮತ್ತು ಕಾಳು ಮೆಣಸಿನ ಗಿಡಗಳನ್ನು ಜಿಲ್ಲೆಯ ವಿವಿಧ ಸಸ್ಯ ಪಾಲನ ಕೇಂದ್ರಗಳಿಂದ ಬೆಳೆಗಾರರಿಗೆ ಹಾಗೂ ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಿದೆ.ಏಲಕ್ಕಿ ಸಸಿ ರೂ. 8 ಹಾಗೂ ಕಾಳು ಮೆಣಸು ರೂ, 6.75 (ಒಂದು ಕಡ್ಡಿಗೆ)ಗಳಿಗೆ ಮಡಿಕೇರಿ ತಾಲೂಕಿನ ಬಿಳಿಗೇರಿ ಸಸ್ಯಪಾಲನ ಕೇಂದ್ರ (08272-227363) ಸೋಮವಾರಪೇಟೆ ತಾಲೂಕಿನ ಐಗೂರು ಸಸ್ಯ ಪಾಲನ ಕೇಂದ್ರ (08276-287852)ದಲ್ಲಿ ಪಡೆಯಬಹುದಾಗಿದೆ,

ಆಸಕ್ತ ಬೆಳೆಗಾರರು ನಿಗದಿತ ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಸಂಬಾರ ಮಂಡಳಿಯ ಕ್ಷೇತ್ರಾಧಿಕಾರಿಗಳ ಕಚೇರಿಗಳಾದ ಮಡಿಕೇರಿ (08272-223814), ವೀರಾಜಪೇಟೆ (08274-257251), ಸೋಮವಾರಪೇಟೆ (08276-282165), ಭಾಗಮಂಡಲ (08272-243445)ನ್ನು ಸಂಪರ್ಕಿಸಬಹುದಾಗಿದೆ ಎಂದು ಭಾರತೀಯ ಸಂಬಾರ ಮಂಡಳಿಯ ಸಹಾಯಕ ನಿರ್ದೇಶಕ ಜೋಜಿ ಮ್ಯಾಥ್ಯೂ ತಿಳಿಸಿದ್ದಾರೆ.