ಸೋಮವಾರಪೇಟೆ, ಜೂ. 23: ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಮೂವರನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿದ್ದಾರೆ.
ಬುಧವಾರ ರಾತ್ರಿ 9.30ರ ವೇಳೆಗೆ ಐಗೂರಿನ ಪ್ರಾರ್ಥನಾ ಮಂದಿರದಿಂದ ಹಿಂದಿರುಗುತ್ತಿದ್ದ ಖಾಲಿದ್ ಮತ್ತು ಅನ್ವರ್ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರ ವಾಹನಗಳಿಗೂ ಜಖಂ ಉಂಟಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಗೂರಿನ ಶರತ್, ರಾಜೇಶ್ ಮತ್ತು ಭರತ್ ಎಂಬವರ ಮೇಲೆ ಸೆಕ್ಷನ್ 324 ಮತ್ತು 427ರ ಅನ್ವಯ ಮೊಕದ್ದಮೆ ದಾಖಲು ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವದು ಎಂದು ಡಿವೈಎಸ್‍ಪಿ ಕುಮಾರ್ ತಿಳಿಸಿದ್ದಾರೆ.