ಸುಳ್ಯ, ಜೂ. 25: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಅಧೀನದಲ್ಲಿ ನಡೆದ 2015-16 ನೇ ಸಾಲಿನ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ರೇಂಜ್‍ನ ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಕ್ಕೆ ಡಿಸ್ಟಿಂಕ್ಷನ್ ಹಾಗೂ 100 ಫಲಿತಾಂಶ ಬಂದಿದೆ. 5ನೇ ತರಗತಿಯಲ್ಲಿ ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳು ಹಾಗೂ 7ನೇ ತರಗತಿಯಲ್ಲಿ ಹಾಜರಾದ 20 ವಿದ್ಯಾರ್ಥಿಗಳು ತೇರ್ಗಡೆಗೊಂಡು ಮದ್ರಸಕ್ಕೆ ಶೇ. 100 ಫಲಿತಾಂಶಗಳಿಸಿದ್ದಾರೆ.