ಕೂಡಿಗೆ, ಜೂ. 25: ಇಲ್ಲಿಗೆ ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಚೆಟ್ಟೀರ ದಾದ ಉತ್ತಯ್ಯ ಅವರ ಜಮೀನಿನಲ್ಲಿ ಬೆಳೆಸಲಾಗಿದ್ದ ಅಡಿಕೆ ಗಿಡಗಳನ್ನು ಕಾಡಾನೆ ಹಿಂಡು ತುಳಿದು ನಾಶಪಡಿಸಿದೆ.
ಬೆಂಡೆಬೆಟ್ಟ ಕಡೆಯಿಂದ ಬಂದಿರುವ ಕಾಡಾನೆ ಹಿಂಡು ಅಡಿಕೆ ತೋಟಕ್ಕೆ ನುಗ್ಗಿ 20 ಅಡಿಕೆ ಮರಗಳನ್ನು ನೆಲಕ್ಕುರುಳಿಸಿ ನಷ್ಟ ಪಡಿಸಿವೆ. ಚೆಟ್ಟೀರ ದಾದ ಉತ್ತಯ್ಯನವರು ಹಾಗೂ ಗ್ರಾಮಸ್ಥರು ಆಗಿರುವ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಹುದುಗೂರು ಉಪ ವಲಯಾರಣ್ಯಾಧಿಕಾರಿ ಸತೀಶ್ ಅರಣ್ಯ ರಕ್ಷಕ ಕಿರಣ್ ಕುಮಾರ್, ಗ್ರಾ.ಪಂ. ಸದಸ್ಯ ಹೆಚ್.ಎಸ್. ರವಿ, ಗ್ರಾಮದ ಪ್ರಮುಖರಾದ ಟಿ.ಪಿ. ಪೂವಯ್ಯ, ಗಿರೀಶ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.