ಗುಡ್ಡೆಹೊಸುರು, ಜೂ. 20: ಕಾವೇರಿ ನದಿ ಶುದ್ಧೀಕರಣದ ನದಿ ನೀರು ಕಲುಷಿತವಾಗುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಲಾಕಾವೇರಿಯಿಂದ ಆರಂಭಗೊಂಡ ಯಾತ್ರೆಯು ನಂಜರಾಯಪಟ್ಟಣ ಮೂಲಕ ಗುಡ್ಡೆಹೊಸೂರು ತಲಪಿದ ಸಂದÀರ್ಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.

ಯಾತ್ರೆಯಲ್ಲಿ ಭಾಗವಹಿಸಿದ್ದ ಸ್ವಾಮಿಜಿಗಳ ತಂಡದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋನದ ಸಂಚಾಲಕ ಚಂದ್ರಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಮತ್ತು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್ ಇದ್ದರು.

ಯಾತ್ರೆಯಲ್ಲಿ ಪುಟ್ಟ ಮಕ್ಕಳು ಹೆಜ್ಜೆ ಹಾಕುತ್ತಾ ‘ಕಾವೇರಿ ಮಾತಾಕೀ ಜೈ’ ಘೋಷಣೆ ಕೂಗುತ್ತಾ ಗುಡ್ಡೆಹೊಸುರು ಗ್ರಾಮದ ರಾಜ್ಯಹೆದ್ದಾರಿ ಬಳಿ ಸಮಾವೇಶ ನಡೆಸಲಾಯಿತು. ಭಾರತೀಶ್ ಮತು ಚಿ.ನಾ. ಸೋಮೇಶ್ ಮಾತನಾಡಿ ಕಾವೇರಿ ನದಿನೀರು ಕಲುಷಿತ ವಾಗುತ್ತಿರುವ ಬಗ್ಗೆ ವಿವರಿಸಿದರು.

ಕಲುಷಿತ ತಡೆಗಟ್ಟಲು ಇರುವ ಮಾರ್ಗಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ಈ ಸಂಧರ್ಭ ಸ್ಥಳೀಯರಾದ ಕೆದಂಬಾಡಿ ಅಶೋಕ್, ರತೀಶ್, ಮಂಡೆಪಂಡ ಉತ್ತಪ್ಪ (ಚಿಮ್ಮ), ಸೂರಪ್ಪ, ಗೀರಿಶ್, ಕುಡೆಕಲ್ಲು ಗಣೇಶ್, ಗ್ರಾ.ಪಂ. ಸದಸ್ಯ ನಾರಾಯಣ, ಚೈತ್ರ ಭಾರತೀಶ್, ಧನಪಾಲ್, ನಂದ, ಪೂವಯ್ಯ, ಅರುಣ್, ಮುಂತಾದವರು ಹಾಜರಿದ್ದರು. ಈ ಸಂದÀರ್ಭ ಪ್ರತಿಯೋಬ್ಬ ನಾಗರಿಕನು ಕಾವೇರಿ ನದಿ ನೀರಿನ ಸ್ವಚ್ಛತೆ ಬಗ್ಗೆ ಗಮನಹರಿಸಿ ತಾಯಿ ಕಾವೇರಿ ಮಾತೆಯ ಋಣವನ್ನು ತೀರಿಸುವಂತೆ ಸ್ವಾಮೀಜಿಗಳು ಮನವಿ ಮಾಡಿದರು.