ಸೋಮವಾರಪೇಟೆ, ಮೇ 14: ತಾಲೂಕಿನಾದ್ಯಂತ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿರುವ ಕೂತಿ ಗ್ರಾಮದಲ್ಲಿ ಇಂದು ಆಲಿಕಲ್ಲು ಸಹಿತ ಭಾರೀ ಮಳೆ ಸುರಿಯಿತು.

ಪ್ರಸಕ್ತ ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಸುರಿದ ಮಳೆ ಭಾರೀ ಗಾಳಿ ಸಹಿತ ಕೆಲ ಗಂಟೆಗಳ ಕಾಲ ಜನಜೀವನವನ್ನು ಅಸ್ತವ್ಯಸ್ತವನ್ನಾಗಿಸಿತು. ಮೊದಲ ಮಳೆಯಲ್ಲೇ ಆಲಿಕಲ್ಲು ಬಿದ್ದಿದ್ದರಿಂದ ಮಕ್ಕಳು ಕುಣಿದು ಕುಪ್ಪಳಿಸಿದರು. ಬಿರುಬೇಸಗೆಯಿಂದ ಕೂಡಿದ್ದ ವಾತಾವರಣ ಮಳೆಯ ಸಿಂಚನದಿಂದ ತಂಪಾಯಿತು.