ಗೋಣಿಕೊಪ್ಪಲು, ಜು. 1: ಕೊಡಗಿನ ನೂತನ ಉಸ್ತುವಾರಿ ಸಚಿವರು ಹಾಗೂ ಯೋಜನಾ ಮತ್ತು ಸಾಂಖ್ಯಿಕ, ವಿಜ್ಞಾನ-ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಮ್ ಅವರನ್ನು ಕೊಡಗು ಬಲಿಜ ಜನಾಂಗದ ಪದಾಧಿಕಾರಿಗಳು ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ಎಂ.ಎಸ್. ರಾಮಯ್ಯ ಚಾರಿಟೇಬಲ್ ಟ್ರಸ್ಟ್‍ನ ಉಪಾಧ್ಯಕ್ಷರೂ ಆಗಿರುವ ಸೀತಾರಾಮ್ ಅವರು ಬಲಿಜ ಜನಾಂಗದ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಿದ್ದು, ಮಡಿಕೇರಿ ತಾಲೂಕು ಶ್ರೀ ಯೋಗಿನಾರಾಯಣ ಬಲಿಜ ಸಂಘದ ಅಧ್ಯಕ್ಷೆ ಮೂರ್ನಾಡುವಿನ ಮೀನಾಕ್ಷಿ ಕೇಶವ್, ಜಿಲ್ಲಾ ಬಲಿಜ ಸಂಘಟನಾ ಸಂಚಾಲಕ ಟಿ.ಎಲ್. ಶ್ರೀನಿವಾಸ್, ಸೋಮವಾರಪೇಟೆ ತಾಲೂಕಿನ ಬಲಿಜ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್. ಬಾಲಕೃಷ್ಣ, ಮಡಿಕೇರಿ ತಾಲೂಕು ಘಟಕದ ಉಪಾಧ್ಯಕ್ಷ ಟಿ.ಹೆಚ್. ಉದಯಕುಮಾರ್, ಸಂಘಟನಾ ಕಾರ್ಯದರ್ಶಿ ನಾಗೇಶ್ ನಾಯ್ಡು, ಟಿ.ಎಸ್. ವೆಂಕಟೇಶ್ ಹಾಗೂ ಮಡಿಕೇರಿ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ವಿ. ಲೋಕೇಶ್ ಅವರುಗಳು ಅಭಿನಂದಿಸಿದರು.
ಬಲಿಜ ಜನಾಂಗದ ಪ್ರಮುಖ ರಾದ ಎಂ.ಆರ್. ಸೀತಾರಾಮ್ ಅವರನ್ನು ಕೊಡಗು ಉಸ್ತುವಾರಿ ಸಚಿವರನ್ನಾಗಿ ನಿಯೋಜಿಸುವ ಮೂಲಕ ಬಲಿಜ ಜನಾಂಗಕ್ಕೂ ಪ್ರಾತಿನಿಧ್ಯ ನೀಡಿದ ಕ್ರಮವನ್ನು ನಿಯೋಗದ ಪ್ರತಿನಿಧಿಗಳು ಸ್ವಾಗತಿಸಿದರು. ಕೊಡಗು ಜಿಲ್ಲೆಯ ಹಲವು ಸಮಸ್ಯೆಗಳು, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಮಾಜಿ ಜಿಲ್ಲಾ ಉಸ್ತುವಾರಿ ಸಚಿವೆ ಸುಮಾ ವಸಂತ್, ಕುಶಾಲನಗರದ ಕಾಂಗ್ರೆಸ್ ಪ್ರಮುಖ ನರಸಿಂಹಮೂರ್ತಿ, ಗೋಕುಲ್‍ನಾಥ್ ನಾಯಕ್ ಉಪಸ್ಥಿತರಿದ್ದರು.