ಶನಿವಾರಸಂತೆ, ಜೂ. 21: ಕೊಡ್ಲಿಪೇಟೆ ನಾಡಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಎಸ್.ಎಂ. ನರಗುಂದ ವಹಿಸಿದ್ದರು.
ಕಾರ್ಯಕ್ರಮದಲ್ಲಿ 7 ಮಂದಿ ಫಲಾನುಭವಿಗಳಿಗೆ ಪಿಂಚಣಿ ಅದಾಲತ್ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕೊಡ್ಲಿಪೇಟೆ ನಾಡಕಚೇರಿಯ ಪ್ರಬಾರ ಉಪತಹಶೀಲ್ದಾರ್ ದೇವರಾಜ್, ಸಿಬ್ಬಂದಗಳಾದ ಪ್ರಹ್ಲಾದ್, ದೀಕ್ಷಿತ್, ಕುಮಾರ್ ಇದ್ದರು.
ನಾಡಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಶನಿವಾರಸಂತೆ ನಾಡಕಚೇರಿಯ ಪ್ರಬಾರ ಉಪತಹಶೀಲ್ದಾರ್ ಮಧುಸೂದನ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಹೆಚ್.ಆರ್. ರುದ್ರಯ್ಯ, ಸಿಬ್ಬಂದಿ ಹೂವಯ್ಯ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.