ಮಡಿಕೇರಿ, ಜೂ. 21: ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ರೋಟರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿಯ ಜನಪರ ಕಾರ್ಯಕ್ರಮಗಳನ್ನು ಗುರುತಿಸಿ ಆರು ಪ್ರಶಸ್ತಿಗಳನ್ನು ನೀಡಿದ್ದಾರೆ.

ಜಿಲ್ಲಾ ರಾಜ್ಯಪಾಲ ಭಾರತೇಶ್ ಆದಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ಜಮುನ ತಿಮ್ಮಯ್ಯ, ಕಾರ್ಯದರ್ಶಿ ಪದ್ಮ, ಖಜಾಂಚಿ ದಿಲನ್ ಚಂಗಪ್ಪ, ಸದಸ್ಯರಾದ ರೀಟಾ ದೇಚಮ್ಮ, ವಾಸು ಉತ್ತಪ್ಪ ಹಾಗೂ ಡಾ. ಆಶಿಕ್ ಚಂಗಪ್ಪÀ ಭಾಗವಹಿಸಿದ್ದರು.