ನಾಪೆÇೀಕ್ಲು, ಜೂ. 20: ಕಳೆದ ಸಾಲಿನ ಮಳೆಗಾಲದಲ್ಲಿ ನಾಪೆÇೀಕ್ಲು ವ್ಯಾಪ್ತಿಯ ನೆಲಜಿ, ಕುಂಜಿಲ, ಯವಕಪಾಡಿ ಮತ್ತಿತರ ದೇವಾಲಯ ಗಳಲ್ಲಿ ಕಳ್ಳತನ ಯತ್ನ ನಡೆದಿದೆ. ಕಳ್ಳರು ಮಳೆಗಾಲದಲ್ಲಿ ದೇವಾಲಯ ಗಳಲ್ಲಿ ಕಳ್ಳತನ ನಡೆಸುವ ಸಂಚು ರೂಪಿಸಿರು ವದು ಇದರಿಂದ ಸ್ಪಷ್ಟವಾಗಿದೆ. ಈ ವರ್ಷ ಮಳೆಗಾಲ ಆರಂಭವಾಗಿದ್ದು, ಎಲ್ಲಾ ದೇವಾಲಯಗಳ ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಈ ಬಗ್ಗೆ ಜಾಗೃತರಾಗ ಬೇಕೆಂದು ಕುಂಜಿಲ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಸಲಹೆ ನೀಡಿದ್ದಾರೆ.